ಮೈಸೂರು: ಬಿಜೆಪಿ ಪ್ರವಾಹ ಇದ್ದ ಹಾಗೆ. ಎಷ್ಟೆಷ್ಟು ನದಿಗಳು ಬಂದು ಸೇರಿಕೊಳ್ಳುತ್ತವೊ ಅಷ್ಟು ಒಳ್ಳೆಯದು.ಸುಮಲತಾ ಅಂಬರೀಶ್ ಬಿಜೆಪಿಗೆಬರಲಿ, ಎಲ್ಲರಿಗೂ ಸ್ವಾಗತ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಇಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಎಸ್ಪಿಯನ್ನು ಭೇಟಿ ಮಾಡಿ ನಾಯಕ-ಪರಿವಾರ ಜನಾಂಗದ ಬಗ್ಗೆ ಇರುವ ಗೊಂದಲಗಳ ಬಗ್ಗೆ ಚರ್ಚೆ ಮಾಡಿದ ಅವರು, ಚುನಾವಣೆ ಘೋಷಣೆಯಾದ ಬಗ್ಗೆ ಪ್ರತಿಕ್ರಿಯಿಸಿದರು.
ಓರ್ವ ರಾಜಕೀಯ ವ್ಯಕ್ತಿ ಚುನಾವಣೆ ಆದ ನಂತರ ಮತ್ತೊಂದು ಚುನಾವಣೆಯ ಬಗ್ಗೆ ಯೋಚನೆ ಮಾಡುತ್ತಾನೆ. ಆದರೆ ಓರ್ವ ಮುದ್ಸದ್ಧಿ ಮುಂದಿನ ತಲೆಮಾರಿನ ಬಗ್ಗೆ ಯೋಚನೆ ಮಾಡುತ್ತಾನೆ ಎಂದರು.