ಮೈಸೂರು:ವಿಧಾನಸಭೆಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದಿನ್ನೂ ಖಚಿತವಾಗಿಲ್ಲ. ಆದರೆ, ಈಗಾಗಲೇ ಎರಡು ದಿನ ವರುಣಾ ಕ್ಷೇತ್ರದಲ್ಲಿ ಅವರು ರೌಂಡ್ಸ್ ಹಾಕಿದ್ದರಿಂದ ಆ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ತಯಾರಿ ನಡೆಸುತ್ತಿದೆ.
ಸಿದ್ದರಾಮಯ್ಯರಿಗೆ ಬೇರೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಾಯ ಇರುವಂತೆ ವರುಣಾದಲ್ಲಿಯೂ ಕೂಡ ಒತ್ತಾಯವಿದೆ. ಸಿದ್ದರಾಮಯ್ಯರ ವಿರುದ್ಧ ತೊಡೆತಟ್ಟಲು ವರುಣಾ ಕ್ಷೇತ್ರದ ಮುಖಂಡರೇ ವೇದಿಕೆ ನಿರ್ಮಿಸಿಕೊಳ್ಳುತ್ತಿದ್ದಾರೆ. ವರುಣಾ ವ್ಯಾಪ್ತಿಯಲ್ಲಿರುವ ಹದಿನಾರು ಗ್ರಾಮದಲ್ಲಿರುವ ಮಾದೇಶ್ವರ ದೇವಾಲಯದಲ್ಲಿ ಸಭೆ ನಡೆಸಿದ ಕ್ಷೇತ್ರದ ಬಿಜೆಪಿ ಮುಖಂಡರು ಈ ಬಾರಿ ಶತಾಯಗತಾಯ ವರುಣಾದಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಪಣತೊಟ್ಟಿದ್ದಾರೆ.