ಕರ್ನಾಟಕ

karnataka

ETV Bharat / state

ಬಿಜೆಪಿ ನಾಯಕ ಆನಂದ್ ಕೊಲೆ ಪ್ರಕರಣ: ವಿಚಾರಣೆ ವೇಳೆ ಆರೋಪಿ ಹೇಳಿದ್ದೇನು ? - ಬಿಜೆಪಿ ಸ್ಲಂ ಮೋರ್ಚ ಉಪಾಧ್ಯಕ್ಷ ಆನಂದ್ ಹತ್ಯೆ

ಮಾರ್ಚ್ 2 ರಂದು ಮೈಸೂರಿನ ಕುವೆಂಪು ನಗರದ ಸರ್ವೀಸ್ ಅಪಾರ್ಟ್​ಮೆಟ್​ನಲ್ಲಿ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ಆನಂದ್ ಅವರ​ನ್ನು ಅವರ ಹುಟ್ಟುಹಬ್ಬದ ದಿನ ಬಿಯರ್ ಬಾಟಲಿನಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿ ಬಸವರಾಜ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆರೋಪಿ ಹತ್ಯೆಯ ಕಾರಣ ಬಾಯ್ಬಿಟ್ಟಿದ್ದಾನೆ.

BJP Leader Anand Murder case Trial of the accused
ಬಿಜೆಪಿ ನಾಯಕ ಆನಂದ್ ಕೊಲೆ ಪ್ರಕರಣ

By

Published : Mar 11, 2020, 10:44 AM IST

ಮೈಸೂರು: ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ಆನಂದ್ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಹತ್ಯೆಯ ಕಾರಣವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ.

ಮಾರ್ಚ್ 2 ರಂದು ಕುವೆಂಪು ನಗರದ ಸರ್ವೀಸ್ ಅಪಾರ್ಟ್​ಮೆಟ್​ನಲ್ಲಿ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ಆನಂದ್ ಅವರ​ನ್ನು ಅವರ ಹುಟ್ಟುಹಬ್ಬದ ದಿನ ಬಿಯರ್ ಬಾಟಲ್​​ನಿಂದಲೇ ಚುಚ್ಚಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿ ಬಸವರಾಜ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ, ಆರೋಪಿ ಹತ್ಯೆಯ ಕಾರಣ ಬಾಯ್ಬಿಟ್ಟಿದ್ದು, ಹುಟ್ಟು ಹಬ್ಬದ ಪಾರ್ಟಿಯಲ್ಲಿ ತನ್ನ ತಾಯಿ ಮತ್ತು ಹೆಂಡತಿ ಬಗ್ಗೆ ಕೀಳಾಗಿ ಮಾತನಾಡಿದ್ದೇ ಕೊಲೆಗೆ ಕಾರಣ ಎಂದು ಹೇಳಿದ್ದಾನೆ.

ಬಂಧಿತ ಆರೋಪಿ ಬಸವರಾಜ್

ಘಟನೆ ವೇಳೆ ಸ್ಥಳದಲ್ಲಿ ಇನ್ನೂ 5 ಮಂದಿ ಇದ್ದರು ಎನ್ನಲಾಗಿದ್ದು, ಅವರೆಲ್ಲ ಸ್ಥಳದಿಂದ ಪರಾರಿಯಾಗಿದ್ದಾರೆ. ಎಲ್ಲರ ಬಂಧನದ ಬಳಿಕವಷ್ಟೇ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.

ABOUT THE AUTHOR

...view details