ಕರ್ನಾಟಕ

karnataka

ETV Bharat / state

ಜೆಡಿಎಸ್​​​ ಸಹಕಾರದಿಂದ ಸರ್ಕಾರ ಉಳಿದ್ರೆ ಶಾಸಕನಾಗೇ ಇರ್ತೀನಿ: ಜಿಟಿಡಿ ಘೋಷಣೆ - ಬಿಜೆಪಿ‌ ಸರ್ಕಾರ ಉಳಿದ್ರೆ ಶಾಸಕನಾಗಿ ಉಳಿಯುತ್ತೀನಿ: ಜಿ.ಟಿ.ದೇವೇಗೌಡ

ಜೆಡಿಎಸ್ ಸಹಕಾರದಿಂದ ರಾಜ್ಯದ ಬಿಜೆಪಿ ಸರ್ಕಾರ ಉಳಿದರೆ, ನಾನು ಶಾಸಕನಾಗಿ ಉಳಿಯುತ್ತೇನಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ‌.ಟಿ.ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಸಹಕಾರದಿಂದ ಬಿಜೆಪಿ‌ ಸರ್ಕಾರ ಉಳಿದ್ರೆ ಶಾಸಕನಾಗಿ ಉಳಿಯುತ್ತೀನಿ: ಜಿ.ಟಿ.ದೇವೇಗೌಡ

By

Published : Nov 5, 2019, 1:30 PM IST

Updated : Nov 5, 2019, 1:59 PM IST

ಮೈಸೂರು: ಜೆಡಿಎಸ್ ಸಹಕಾರದಿಂದ ರಾಜ್ಯದ ಬಿಜೆಪಿ ಸರ್ಕಾರ ಉಳಿದರೆ, ನಾನು ಶಾಸಕನಾಗಿ ಉಳಿಯುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ‌.ಟಿ.ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಸಹಕಾರದಿಂದ ಬಿಜೆಪಿ‌ ಸರ್ಕಾರ ಉಳಿದ್ರೆ ಶಾಸಕನಾಗಿ ಉಳಿಯುತ್ತೀನಿ: ಜಿ.ಟಿ.ದೇವೇಗೌಡ

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಜೆಡಿಎಸ್ ಸಹಕಾರದಿಂದ ಬಿಜೆಪಿ ಅನುಕೂಲವಾದರೆ ನಾನು ಶಾಸಕನಾಗಿಯೇ ಉಳಿಯುತ್ತೇನಿ. ನನಗೆ ಅಧಿಕಾರದ ಆಸೆ ಇಲ್ಲ ಎಂದರು. ಹುಣಸೂರು ವಿಧಾನಸಭಾ ಬೈ ಎಲೆಕ್ಷನ್​​ನಲ್ಲಿ ನಮ್ಮ ಕುಟುಂಬದಿಂದ ಸ್ಪರ್ಧೆ ಮಾಡಲು ಒತ್ತಾಯ ಬಂದಿಲ್ಲ, ಚುನಾವಣೆಗೆ ನಮ್ಮ ಕುಟುಂಬದವರು ಸ್ಪರ್ಧೆ ಮಾಡುವುದಿಲ್ಲ. ನಾನು ಚುನಾವಣೆಯಲ್ಲಿ ತಟಸ್ಥನಾಗಿರುತ್ತೇನೆ ಎಂದರು.

ಮಂಗಳೂರಿನಲ್ಲಿ ನಡೆಯಲಿರುವ ಸಮಾವೇಶಕ್ಕೆ ನಾನು ಹೋಗುವುದಿಲ್ಲ. ನನ್ನ ಹೆಸರು ಮುಂಚೂಣಿಯಲ್ಲಿ ಯಾಕೆ ಹರಿದಾಡುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ನನ್ನ ಕ್ಷೇತ್ರದ ಕೆಲಸ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದರು.

Last Updated : Nov 5, 2019, 1:59 PM IST

ABOUT THE AUTHOR

...view details