ಕರ್ನಾಟಕ

karnataka

ETV Bharat / state

ಬಿಜೆಪಿ ತನ್ನ ಆಪರೇಷನ್​​ ಕಮಲ ಸಂಪ್ರದಾಯ ಮುಂದುವರೆಸಿದೆ: ಧ್ರುವ ನಾರಾಯಣ್​​ - Kannada news

ರಾಜ್ಯದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಬಹಳ ದುರದೃಷ್ಟಕರ. ಆಪರೇಷನ್ ಕಮಲ ಎಂಬ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ಬಿಜೆಪಿ ಮತ್ತೊಮ್ಮೆ ಶಾಸಕರಿಗೆ ಆಮಿಷವೊಡ್ಡಿದೆ ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಆರೋಪಿಸಿದ್ದಾರೆ.

ಮಾಜಿ ಸಂಸದ ಧ್ರುವ ನಾರಾಯಣ್

By

Published : Jul 15, 2019, 7:24 PM IST

ಮೈಸೂರು : ರಾಜ್ಯದಲ್ಲಿ ಬರವಿದ್ದರೂ ಜನ ಸೇವಕರು ದುಬಾರಿ ಹೋಟೆಲ್​​ಗಳಲ್ಲಿ ಕುಳಿತು ಮೋಜು ಮಸ್ತಿ ಮಾಡುವುದು ಸರಿಯಾದ ಸಂಪ್ರದಾಯವಲ್ಲ ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಹೇಳಿದರು.

ನಂಜನಗೂಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಬಹಳ ದುರದೃಷ್ಟಕರ. ರಾಜ್ಯದಲ್ಲಿ ತನ್ನ ಸರ್ಕಾರವಿದ್ದಾಗ ಆಪರೇಷನ್ ಕಮಲ ಎಂಬ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ಬಿಜೆಪಿ, ಮತ್ತೊಮ್ಮೆ ಶಾಸಕರಿಗೆ ಆಮಿಷವೊಡ್ಡಿ ಈ ಸಂಪ್ರದಾಯವನ್ನು ಮುಂದುವರೆಸುತ್ತಿರುವುದು ಇಡೀ ದೇಶಕ್ಕೆ ಒಂದು ಕೆಟ್ಟ ಸಂದೇಶ ಸಾರುತ್ತಿದೆ.

ಮಾಜಿ ಸಂಸದ ಧ್ರುವ ನಾರಾಯಣ್

ರಾಜ್ಯದಲ್ಲಿ ಬೀಕರ ಬರಗಾಲವಿದ್ದರೂ ಜನಪ್ರತಿನಿಧಿಗಳು ಮೋಜು, ಮಸ್ತಿ ಮಾಡುತ್ತ ಹೋಟೆಲ್​​ನಲ್ಲಿ ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಇಂತಹ ಕೆಟ್ಟ ಸಂಪ್ರದಾಯ ರಾಜ್ಯಕ್ಕೆ ಒಳ್ಳೆಯದಲ್ಲ. ಸಮಸ್ಯೆಗಳಿದ್ದರೆ ನಾಯಕರ ಗಮನಕ್ಕೆ ತರಬೇಕು. ಆದ್ರೆ ಪ್ರಭಾವಿ ಮುಖಂಡರೇ ರಾಜೀನಾಮೆ ಕೊಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

ABOUT THE AUTHOR

...view details