ಮೈಸೂರು:ದೇಶದಲ್ಲೇ ಅತಿ ಹೆಚ್ಚು ಜನೌಷಧಿ ಕೇಂದ್ರವಿರುವ ವಿಧಾನಸಭಾ ಕ್ಷೇತ್ರ ಕೆ.ಆರ್. ಕ್ಷೇತ್ರವಾಗಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಅತಿ ಹೆಚ್ಚು ಮತ ನೀಡುತ್ತೇವೆ ಎಂದು ಶಾಸಕ ರಾಮದಾಸ್ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಪ್ರತಾಪ್ಸಿಂಹ ಅತಿ ಹೆಚ್ಚು ಅಂತರದಿಂದ ಗೆಲ್ಲರಿದ್ದಾರೆ: ಶಾಸಕ ರಾಮದಾಸ್ - undefined
ಇಂದು ನಗರದಲ್ಲಿ ರೋಡ್ ಶೋ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಪ್ರತಾಪ್ಸಿಂಹ ಪರ ಶಾಸಕ ರಾಮದಾಸ್ ಮತಯಾಚನೆ ನಡೆಸಿದರು.
ಇಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ಸಿಂಹ ಜೊತೆ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಮತ ಯಾಚನೆ ಮಾಡುವ ಸಂದರ್ಭದಲ್ಲಿ 'ಈಟಿವಿ ಭಾರತ್' ಜೊತೆ ಮಾತನಾಡಿದ ಅವರು, ಈ ಬಾರಿ ನನ್ನ ಕ್ಷೇತ್ರದ ಜನ ಮೋದಿ ಜಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಅಸೆ ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಕೇಂದ್ರದ ಯೋಜನೆಗಳು ಅತಿ ಹೆಚ್ಚಾಗಿ ನಮ್ಮ ಕ್ಷೇತ್ರದಲ್ಲಿಯೇ ಬಳಕೆ ಆಗಿವೆ ಎಂದರು.
2022ಕ್ಕೆ ಎಲ್ಲರಿಗೂ ಒಂದು ಸ್ವಂತ ಮನೆಯನ್ನು ಕೊಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಸೆಯಾಗಿದೆ. ಈ ವಿಚಾರವನ್ನು ಇಟ್ಟುಕೊಂಡು ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 14 ಸಾವಿರ ಮನೆಗಳನ್ನು ಕೊಡುವುದಕ್ಕೆ ತಯಾರಿ ಮಾಡುತ್ತಿದ್ದೇವೆ. ಕಳೆದ ಬಾರಿ 70 ಲಕ್ಷ ಮತ ಕೊಟ್ಟಿದ್ದೆವು, ಈ ಬಾರಿ ಒಂದು ಲಕ್ಷ ಮೋದಿ ಮತದಾರರಾಗಿ ಪರಿವರ್ತನೆಯಾಗುತ್ತೆ ಎಂದರು. ಅತಿ ಹೆಚ್ಚು ಜನೌಷಧ ಕೇಂದ್ರ ಇರುವುದು ನಮ್ಮ ಕೆ.ಆರ್.ಕ್ಷೇತ್ರದಲ್ಲಿ. ಕಳೆದ ಬಾರಿ 80 ಸಾವಿರ ಮತಗಳನ್ನು ನೀಡಿದ್ದೆವು. ಈ ಬಾರಿ ಪ್ರತಾಪ್ ಸಿಂಹ ಅತಿ ಹೆಚ್ಚು ಅಂತರದಿಂದ ಗೆದ್ದು ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.