ಮೈಸೂರು:ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಅವರಿಗೆ ಬಿಜೆಪಿ ನಿಯೋಗ ಮನವಿ ಮಾಡಿದೆ.
ಮಹಿಷ ದಸರಾ ಆಚರಣಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ್, ಅ.05ಕ್ಕೆ ಅನುಮತಿ ನೀಡದಿದ್ದರೂ ಮಹಿಷ ದಸರಾ ಮಾಡುತ್ತೇವೆ ಎಂದು ಸವಾಲು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸಿ.ಎಚ್.ವಿಜಯಶಂಕರ್,ಮೈವಿ ರವಿಶಂಕರ್ ನೇತೃತ್ವದ ಬಿಜೆಪಿ ನಿಯೋಗ ಡಿಸಿ ಡಾ.ಗೌತಮ್ ಬಗಾದಿಯವರನ್ನು ಭೇಟಿ ಮಾಡಿ ಮಹಿಷಾ ದಸರಾಗೆ ಆಚರಣೆಗೆ ಅನುಮತಿ ನೀಡದಂತೆ ಮನವಿ ಸಲ್ಲಿಸಿದರು.