ಮೈಸೂರು:ಹುಣಸೂರಿನಲ್ಲಿ ಉಪಚುನಾವಣೆ ಕದನ ರಂಗೇರುತ್ತಿದೆ. ಬಿಜೆಪಿಯಲ್ಲಿರುವ ಒಕ್ಕಲಿಗ ಸಮುದಾಯದವರು ಕರೆದಿದ್ದ ಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ.
ಹುಣಸೂರಿನಲ್ಲಿ ಬಿಜೆಪಿ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಕಾರ್ಯಕರ್ತರ ಕಿತ್ತಾಟ! - ಹುಣಸೂರು ವಿಧಾನಸಭೆ ಉಪಚುನಾಣೆ
ಬಿಜೆಪಿ ಪಕ್ಷದಲ್ಲಿರುವ ಒಕ್ಕಲಿಗ ಸಮುದಾಯದ ಮುಖಂಡರು ವಿವಿಧ ಪಕ್ಷಗಳಲ್ಲಿರುವ ಒಕ್ಕಗಲಿರ ಮನವೊಲಿಸಿ ಬಿಜೆಪಿಗೆ ಮತ ಹಾಕಿಸುವಂತೆ ಚರ್ಚೆ ನಡೆಸಲು ಮುಂದಾಗುತ್ತಿದ್ದಂತೆ ಅವರಲ್ಲೇ ಕಿತ್ತಾಟ ಆರಂಭವಾಗಿದೆ.
ಹುಣಸೂರು ಪಟ್ಟಣದಲ್ಲಿರುವ ಬಿಜಿಎಸ್ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದಲ್ಲಿರುವ ಒಕ್ಕಲಿಗ ಸಮುದಾಯದವರು, ವಿವಿಧ ಪಕ್ಷಗಳಲ್ಲಿರುವ ಒಕ್ಕಗಲಿರ ಮನವೊಲಿಸಿ ಬಿಜೆಪಿಗೆ ಮತ ಹಾಕಿಸುವಂತೆ ಚರ್ಚೆ ನಡೆಸಲು ಮುಂದಾಗುತ್ತಿದ್ದಂತೆ ಅವರಲ್ಲೇ ಕಿತ್ತಾಟ ಆರಂಭವಾಗಿದೆ. ಇದನ್ನು ಗಮನಿಸಿದ ಬಿಜಿಎಸ್ ಸಮುದಾಯದ ಭವನದ ಕಾರ್ಯದರ್ಶಿ, ಈ ಸಮುದಾಯ ಭವನ ರಾಜಕೀಯ ಚಟುವಟಿಕೆಗೆ ಬಳಕೆ ಮಾಡಬಾರದು, ಅನುಮತಿ ಪಡೆಯದೇ ಸಭೆ ನಡೆಸಬಾರದು ಎಂದು ಬೀಗ ಜಡಿದು ಹೋಗಿದ್ದಾರೆ.
ಇದರಿಂದ ಮತ್ತಷ್ಟು ಕೆರಳಿದ ಬಿಜೆಪಿ ಒಕ್ಕಲಿಗ ಕಾರ್ಯಕರ್ತರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕಾರ್ಯಕರ್ತರನ್ನ ಸಮಾಧಾನ ಪಡಿಸಿದ್ದಾರೆ.