ಮೈಸೂರು:ಮೈಸೂರು ರಾಜ ಸಂಸ್ಥಾನದ 25ನೇ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮದಿನವನ್ನು ಮೈಸೂರು ಅರಮನೆಯಲ್ಲಿ ಆಚರಿಸಲಾಯಿತು. ಒಡೆಯರ್ ಅವರ ಜಯಂತ್ಯುತ್ಸವದ ಸಮಾರೋಪ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ ನೀಡಿದರು.
ಜಯಚಾಮರಾಜೇಂದ್ರ ಒಡೆಯರ್ ಜನ್ಮ ಸ್ಮರಣೆ: ಉಪರಾಷ್ಟ್ರಪತಿ ಚಾಲನೆ - ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ
ರಾಜತಂತ್ರ ಹಾಗೂ ಪ್ರಜಾತಂತ್ರ ಎರಡನ್ನೂ ಆಳಿದ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮದಿನಾಚರಣೆ ನಡೆಯಿತು.
ರಾಜಯೋಗಿ ಜಯಚಾಮರಾಜೇಂದ್ರ ಒಡೆಯರ್ ಜನ್ಮ ಸ್ಮರಣೆ
ಅರಮನೆಯಲ್ಲಿ ಇಂದು ನಡೆದ ಒಡೆಯರ್ ಅವರ 101 ನೇ ಜನ್ಮದಿನದ ಆಚರಣೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಸಭಾ ಸದಸ್ಯ ಜಯರಾಮ್ ರಮೇಶ್ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಯೂಟ್ಯೂಬ್ ಲೈವ್ ಸ್ಟ್ರೀಮ್ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮವು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ವತಿಯಿಂದ ರಾಜವಂಶಸ್ಥೆ ಡಾ.ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ನಡೆಯಿತು. ಎಲ್ಲರಿಗೂ ಸಾಮಾಜಿಕ ಜಾಲತಾಣದ ಮೂಲಕ ಆಹ್ವಾನ ನೀಡಿ ಜಾಲತಾಣದ ನೇರ ಪ್ರಸಾರದ ಲಿಂಕ್ ಅನ್ನು ನೀಡಲಾಗಿತ್ತು.