ಮೈಸೂರು:ಬುಲೆಟ್ ಬೈಕ್ಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿ ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುವೆಂಪು ನಗರದ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಲ್ಲದೇ, ಬಂಧಿತರಿಂದ 15 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಏಪ್ರಿಲ್ 3 ರಂದು ಶ್ರೀರಾಮ್ಪುರ ಬಡಾವಣೆಯಲ್ಲಿ ಬುಲೆಟ್ ಬೈಕ್ ಕಳ್ಳತನವಾದ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ಅದರನ್ವಯ ಜುಲೈ 15 ರಂದು ಕುವೆಂಪು ನಗರದ ಪೊಲೀಸರು ಕಾರ್ತಿಕ್ ನಾಯಕ್ ಮತ್ತು ಕಿರಣ್ ಕೆ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇವರಿಬ್ಬರು ಹೆಚ್ಚಾಗಿ ಬುಲೆಟ್ ಬೈಕ್ಗಳನ್ನೇ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಿರುವುದು ತಿಳಿದಿದೆ. ಶೋಕಿ ಜೀವನ ನಡೆಸಲು ಈ ಕೃತ್ಯ ಎಸಗುತ್ತಿದ್ದರು ಎಂಬುದು ಗೊತ್ತಾಗಿದೆ.