ಕರ್ನಾಟಕ

karnataka

By

Published : Dec 10, 2020, 4:20 PM IST

ETV Bharat / state

ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಬೈಕ್ ಕಳ್ಳರ ಬಂಧನ

ಪುಲಕೇಶಿ ರಸ್ತೆ ಖಬರ್ ಸ್ಥಾನ ಜಂಕ್ಷನ್ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಬೈಕ್​ ಕಳ್ಳರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Bike theft accused arrest in Mysore
ಮೈಸೂರಿನಲ್ಲಿ ಬೈಕ್ ಕಳ್ಳರ ಬಂಧನ

ಮೈಸೂರು: ವಿವಿಧ ಪೊಲೀಸ್​ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಮಂಡಿ ಠಾಣೆ ಸಿಬ್ಬಂದಿ ಬಂಧಿಸಿ, 3.10 ಲಕ್ಷ ಮೌಲ್ಯದ 9 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಕಲ್ಯಾಣಗಿರಿ ನಿವಾಸಿ ವಾಸಿಂಪಾಷ (22) ಮತ್ತು ರಾಜೀವ್ ನಗರದ ನಿವಾಸಿ ಸಂದೀಪ್ ಅಲಿಯಾಸ್ ದುರ್ಗ ಸಂದೀಪ್ (20) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿ ವಾಸಿಂ ಪಾಷ, ವರುಣಾ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ 4 ಬೈಕ್ ಕಳ್ಳತನ ಮಾಡಿದ್ದಾನೆ. ಇನ್ನೋರ್ವ ಆರೋಪಿ ಸಂದೀಪ್, ಶ್ರೀರಂಗಪಟ್ಟಣ ಟೌನ್, ಜಯಲಕ್ಷ್ಮಿಪುರಂ, ಕುವೆಂಪು ನಗರ, ಉದಯಗಿರಿ ವ್ಯಾಪ್ತಿಯಲ್ಲಿ ತಲಾ ಒಂದೊಂದು ಬೈಕ್‌ಗಳಂತೆ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಪೊಲೀಸರು ಆರೋಪಿಗಳಿಂದ 3.10 ಮೌಲ್ಯದ 9 ಬೈಕ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details