ಕರ್ನಾಟಕ

karnataka

ETV Bharat / state

ಬೈಕ್ ಕಳ್ಳರ‌ ಬಂಧನ : 12 ಲಕ್ಷ ರೂ.ಮೌಲ್ಯದ 17 ಬೈಕ್ ವಶ... - Bike robber arrested in Mysore

ಮೈಸೂರಿನಲ್ಲಿ ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಮೂವರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿಲಾಗಿದೆ.

Bike robber arrested: 17 bikes worth Rs 12 lakh siezed
ಬೈಕ್ ಕಳ್ಳರ‌ ಬಂಧನ

By

Published : Oct 19, 2020, 11:30 PM IST

ಮೈಸೂರು:ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಮೂವರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ, ಬಂಧಿತರಿಂದ 12 ಲಕ್ಷ ಮೌಲ್ಯದ 17 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸ್ಕೂಟರ್ ಮೆಕ್ಯಾನಿಕ್ ಮಹಮದ್ ಶುಹೇಬ್ (19) ಬಂಧಿತನಾಗಿದ್ದಾನೆ. 17 ವರುಷ ಹಾಗೂ 15 ವರ್ಷದ ಬಾಲಾಪರಾಧಿಗಳನ್ನು ಬಾಲಮಂದಿರದ ವಶಕ್ಕೆ ನೀಡಲಾಗಿದೆ. 2 ರಾಯಲ್ ಫೀಲ್ಡ್ ಸೇರಿದಂತೆ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕಳುವು ಮಾಡಿದ ದ್ವಿಚಕ್ರ ವಾಹನಗಳಲ್ಲಿ ಆರೋಪಿಗಳು ವೀಲಿಂಗ್ ಮಾಡುತ್ತಿದ್ದರು. ಸಿಲ್ವರ್ ಕಲರ್ ದ್ವಿಚಕ್ರ ವಾಹನಗಳನ್ನೇ ಹೆಚ್ಚು ಟಾರ್ಗೆಟ್ ಮಾಡಿ, ನಂಬರ್ ಪ್ಲೇಟ್ ಬದಲಿಸಿ ಬಳಸುತ್ತಿದ್ದ ಖದೀಮರು, ಕಳುವು ಮಾಡಿ ನಂತರ ಮಾರಾಟ ಮಾಡಿದ್ದರು.

ಉದಯಗಿರಿ, ಎನ್.ಆರ್.ಮೊಹಲ್ಲಾ, ವಿಜಯನಗರ, ಮಹದೇವಪುರ, ಶ್ರೀರಂಗಪಟ್ಟಣ ಹಾಗೂ ಮಂಡ್ಯದಿಂದ ವಾಹನಗಳನ್ನು ಕಳುವು ಮಾಡಿದ್ದಾರೆ‌‌‌. ಆರೋಪಿ ಮೊಹಮದ್ ಶುಹೇಬ್​ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details