ಕರ್ನಾಟಕ

karnataka

ETV Bharat / state

ನಾಲೆಯ ತಡೆಗೋಡೆಗೆ ಬೈಕ್ ಡಿಕ್ಕಿ: ಪತ್ನಿ ಮನೆಗೆ ಹೊರಟಿದ್ದ ವ್ಯಕ್ತಿ ದುರಂತ ಅಂತ್ಯ - ನಾಲೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

ಪತ್ನಿಯನ್ನು ಆಕೆಯ ತವರು ಮನೆಯಿಂದ ಕರೆದುಕೊಂಡು ಬರಲು ಹೋಗುತ್ತಿದ್ದಾಗ ವ್ಯಕ್ತಿವೋರ್ವ ಅಪಘಾತದಲ್ಲಿ ಪ್ರಾಣಬಿಟ್ಟಿದ್ದಾನೆ. ಮೈಸೂರು ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.

ಬೈಕ್ ಸವಾರ ಸಾವು

By

Published : Nov 12, 2019, 2:41 PM IST

ಮೈಸೂರು:ಬೈಕ್​ನಲ್ಲಿ ಹೋಗುತ್ತಿರುವಾಗ ಕಾಲುವೆಯ ತಡೆಗೋಡೆಗೆ ಗುದ್ದಿ ನಾಲೆಗೆ ಬಿದ್ದು ವ್ಯಕ್ತಿವೋರ್ವ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಹಸುವಿನಕಾವಲು ಗ್ರಾಮದಲ್ಲಿ ನಡೆದಿದೆ.

ಪತ್ನಿಯನ್ನು ಆಕೆಯ ತವರು ಮನೆಯಿಂದ ಕರೆತರಲು ಹೋಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಣಿ (27) ಮೃತ ವ್ಯಕ್ತಿ. ಕಳೆದ ವರ್ಷ ಈತನ ಮದುವೆಯಾಗಿದ್ದು, ಹೆಂಡತಿಯ ತವರು ಮನೆಯಾದ ಕೋಳಿಮನೆ ಗ್ರಾಮದಿಂದ ಕರೆದುಕೊಂಡು ಬರಲು ಮಂಗಳವಾರ ಸಂಜೆ ಸ್ವಗ್ರಾಮದಿಂದ ಬೈಕ್​ನಲ್ಲಿ ಹೋಗುವಾಗ ಕಾಲುವೆಯ ತಡೆಗೋಡೆಗೆ ಬೈಕ್​ ಗುದ್ದಿದ್ದು, ಮಣಿ ನಾಲೆಗೆ ಬಿದ್ದು ಸಾವನ್ನಪ್ಪಿದ್ದಾನೆ.

ಬೆಟ್ಟದಪುರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ನಾಲೆಯಿಂದ ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.

ABOUT THE AUTHOR

...view details