ಕರ್ನಾಟಕ

karnataka

ETV Bharat / state

ಬೈಕ್ ಸವಾರ ಸಾವು ಪ್ರಕರಣ : ಸಂಚಾರಿ ಪೊಲೀಸರ ವಿರುದ್ಧ ದೂರು ದಾಖಲು‌ - ತಪಾಸಣೆ ವೇಳೆ ಸಾವು

ಬೈಕ್ ಸವಾರ ದೇವರಾಜ್ ಸಾವಿಗೆ ಸಂಚಾರಿ ಪೊಲೀಸರ ಅವೈಜ್ಞಾನಿಕ ತಪಾಸಣೆಯೇ ಮೂಲ ಕಾರಣ ಎಂದು ಆರೋಪಿಸಿ ವಕೀಲ ಮೋಹನ್ ಕುಮಾರ್‌ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೃತ ಇಂಜಿನಿಯರ್‌ಗೆ ನ್ಯಾಯ ಒದಗಿಸಿಕೊಡಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

Complaint against traffic police
ಸಂಚಾರಿ ಪೊಲೀಸರ ವಿರುದ್ದ ದೂರು ದಾಖಲು

By

Published : Mar 26, 2021, 6:06 PM IST

Updated : Mar 26, 2021, 10:36 PM IST

ಮೈಸೂರು :ಸಂಚಾರಿ ಪೊಲೀಸರ ತಪಾಸಣೆ ವೇಳೆ ಟಿಪ್ಪರ್​​ಗೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟ ಆರೋಪದಡಿ ಇದೀಗ ಸಂಚಾರಿ ಪೊಲೀಸರ ವಿರುದ್ಧ ದೂರು ದಾಖಲಾಗಿದೆ.

ಮಾರ್ಚ್ 22ರಂದು ವಿ ವಿ ಪುರಂ ಸಂಚಾರಿ ಪೊಲೀಸರು ರಿಂಗ್ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಪೊಲೀಸರಿಗೆ ಹೆದರಿದ ಬೈಕ್ ಸವಾರ ದೇವರಾಜ್(46) ನೆಲಕ್ಕುರುಳಿ ಅವರ ಮೇಲೆ ಟಿಪ್ಪರ್ ಹರಿದು ಸಾವನಪ್ಪಿದ್ದರು ಎಂದು ಆರೋಪಿಸಲಾಗಿತ್ತು.

ಪೊಲೀಸ್ ವಾಹನ ಜಖಂಗೊಳಿಸಿದ್ದ ಸಾರ್ವಜನಿಕರು

ಈ ವೇಳೆ ಅಲ್ಲೇ ಇದ್ದ ಸಾರ್ವಜನಿಕರು ಪೊಲೀಸರ ವಾಹನ ಜಖಂಗೊಳಿಸಿದ್ದಲ್ಲದೆ ಸಂಚಾರಿ ಪೊಲೀಸರಿಗೆ ಥಳಿಸಿದ್ದರು. ಈ ಸಂಬಂಧ ದೇವರಾಜ್ ಸಾವಿಗೆ ಸಂಚಾರಿ ಪೊಲೀಸರ ಅವೈಜ್ಞಾನಿಕ ತಪಾಸಣೆಯೇ ಮೂಲ ಕಾರಣ ಎಂದು ಆರೋಪಿಸಿ ವಕೀಲ ಮೋಹನ್ ಕುಮಾರ್‌ವೊಬ್ಬರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೃತ ಇಂಜಿನಿಯರ್‌ಗೆ ನ್ಯಾಯ ಒದಗಿಸಿಕೊಡಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಬೈಕ್​ ಸವಾರ ಸಾವು ಪ್ರಕರಣ : ಪೊಲೀಸರ ಮೇಲೆ ಹಲ್ಲೆ ಮಾಡಿದ 8 ಜನರ ಬಂಧನ

Last Updated : Mar 26, 2021, 10:36 PM IST

ABOUT THE AUTHOR

...view details