ಮೈಸೂರು:ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್ಡೌನ್ ಆದೇಶ ಹೊರಡಿಸಲಾಗಿದೆ. ತುರ್ತು ಅಗತ್ಯತೆ ಹೊರತುಪಡಿಸಿ ಉಳಿದಂತೆ ಎಲ್ಲಾ ವಾಹನಗಳು ರಸ್ತೆಗಿಳಿಯದಂತೆ ಆದೇಶ ನೀಡಲಾಗಿದೆ. ಆದರೆ ನಗರದಲ್ಲಿ ಲಾಕ್ಡೌನ್ ಆದೇಶವಿದ್ದರೂ ಉದ್ಧಟತನ ಪ್ರದರ್ಶಿಸಿ ರಸ್ತೆಗಿಳಿದಿದ್ದ ಸವಾರನ ಬೈಕ್ಅನ್ನು ಸೀಜ್ ಮಾಡಲಾಗಿದೆ.
ಲಾಕ್ಡೌನ್ ನಡುವೆ ಬೈಕ್ ರೈಡ್: ಮೈಸೂರಲ್ಲಿ ದ್ವಿಚಕ್ರ ವಾಹನ ಸೀಜ್
ಲಾಕ್ಡೌನ್ ಆದೇಶವಿದ್ದರೂ ಉದ್ಧಟತನ ಪ್ರದರ್ಶಿಸಿ ರಸ್ತೆಗಿಳಿದಿದ್ದ ಸವಾರನ ಬೈಕ್ ಸೀಜ್ ಮಾಡಿರುವ ಘಟನೆ ಮೈಸೂರಿನ ಕೆ.ಆರ್ ವೃತ್ತದ ಬಳಿ ನಡೆದಿದೆ. ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಸವಾರನನ್ನು ತಡೆದ ಪೊಲೀಸರು ಮಾರ್ಚ್ 31ರಂದು ಠಾಣೆಗೆ ಬಂದು ಬೈಕ್ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ಲಾಕ್ಡೌನ್ ನಡುವೆ ಬೈಕ್ ರೈಡ್: ಪೊಲೀಸರಿಂದ ದ್ವಿಚಕ್ರ ವಾಹನ ಸೀಜ್
ಕೆ.ಆರ್.ವೃತ್ತ, ಹಾರ್ಡಿಂಗ್ ವೃತ್ತ, ಮೈಸೂರು ಗಡಿ ಭಾಗದಲ್ಲಿ ಹೈ ಅಲಟ್೯ ಘೋಷಣೆ ಮಾಡಲಾಗಿದ್ದು, ಈ ನಡುವೆ ವಾಹನ ಸವಾರರು ನಿಷೇಧಾಜ್ಞೆ ಉಲ್ಲಂಘಿಸಿರುವ ಪ್ರಕರಣಗಳು ವರದಿಯಾಗಿವೆ. ಈ ನಡುವೆ ಕೆ.ಆರ್.ವೃತ್ತದ ಬಳಿ ಬೈಕ್ನಲ್ಲಿ ಬಂದ ಸವಾರನೋರ್ವನನ್ನು ತಡೆದು ನಿಲ್ಲಿಸಿದ ಸಂಚಾರಿ ಪೊಲೀಸರು ಮಾರ್ಚ್.31ರಂದು ಠಾಣೆಗೆ ಬಂದು ಬೈಕ್ ತೆಗೆದುಕೊಳ್ಳುವಂತೆ ಸೂಚಿಸಿದ್ದಲ್ಲದೆ ಮನೆಯಿಂದ ಹೊರ ಹೋಗದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.