ಮೈಸೂರು:ಬೈಕ್ ಸವಾರನೋರ್ವ ಅಚಾತುರ್ಯದಿಂದ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಅವರ ಕಾರಿಗೆ ಡಿಕ್ಕಿ ಹೊಡೆಸಿರುವ ಘಟನೆ ಸಾಲಿಗ್ರಾಮ ತಾಲೂಕಿನ ರಾಂಪುರ ಜಂಕ್ಷನ್ ಬಳಿ ನಡೆದಿದೆ. ಘಟನೆಯಿಂದ ಕೋಪಗೊಂಡ ಭವಾನಿ ರೇವಣ್ಣ, ಬೈಕ್ ಸವಾರನ ಮೇಲೆ ಗದರಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಂಗ್ ಸೈಡ್ನಿಂದ ಬಂದ ಬೈಕ್ ಸವಾರನೋರ್ವ ಭವಾನಿ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಸಿದ್ದಾನೆ ಎನ್ನಲಾಗಿದೆ. ತಮ್ಮ ಐಷಾರಾಮಿ ಕಾರಿಗೆ ಅಪಘಾತ ಮಾಡಿದ ಸವಾರನಿಗೆ ಜೆಡಿಎಸ್ ನಾಯಕಿ ತರಾಟೆ ತೆಗೆದುಕೊಂಡಿದ್ದಾರೆ. ಘಟನೆ ನಡೆದ ತಕ್ಷಣ ಕಾರನ್ನು ನಿಲ್ಲಿಸಿದ್ದು, ಬೈಕ್ ಸವಾರನನ್ನು ಸ್ಥಳದಲ್ಲಿಯೇ ನಿಲ್ಲಿಸಿಕೊಂಡು ಗದರಿದ್ದಾರೆ. ಇದೆಲ್ಲವನ್ನೂ ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.