ಮೈಸೂರು :ದ್ವಿಚಕ್ರ ವಾಹನಕ್ಕೆ ಜಲ್ಲಿ ತುಂಬಿದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಲಿಂಗಾಬುಧಿ ಪಾಳ್ಯದ ಬಳಿಯ ಪ್ರೀತಿ ಲೇಔಟ್ನಲ್ಲಿ ನಡೆದಿದೆ.
ಡಿ.ಸಾಲುಂಡಿ ನಿವಾಸಿ ಮಧುಸೂದನ್(25) ಮೃತ ಬೈಕ್ ಸವಾರ. ಕೆಲಸದ ನಿಮಿತ್ತ ಮೈಸೂರಿಗೆ ಬಂದಿದ್ದ ಈತ, ಮನೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.