ಮೈಸೂರು :ಎರಡನೇ ಅಲೆಯ ಕೋವಿಡ್ ಲಾಕ್‌ಡೌನ್‌ನಿಂದ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದೆ. ಚೇತರಿಸಿಕೊಳ್ಳಲು ಕನಿಷ್ಠ 2 ವರ್ಷ ಬೇಕು ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.
ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ನಂಬಿ ಬದುಕುವ ನಗರ ಎಂದರೇ ಅದು ಸಾಂಸ್ಕೃತಿಕ ನಗರಿ ಮೈಸೂರು. ಇಲ್ಲಿಗೆ ಪ್ರತಿ ವರ್ಷ 35 ಲಕ್ಷಕ್ಕೂ ಹೆಚ್ಚಿನ ಜನ ಪ್ರವಾಸಿಗರು ಆಗಮಿಸುತ್ತಾರೆ. ಇವರ ಮೇಲೆ ಮೈಸೂರಿನ 2 ಲಕ್ಷಕ್ಕೂ ಹೆಚ್ಚು ಜನ ಅವಲಂಬಿತರಾಗಿದ್ದಾರೆ.
ಕೋವಿಡ್ 2ನೇ ಅಲೆ ಪ್ರವಾಸೋದ್ಯಮಕ್ಕೆ ತೀರಾ ಪೆಟ್ಟುಕೊಟ್ಟಿದೆ. ಇದರಿಂದ ಹೋಟೆಲ್ಗಳ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಮೈಸೂರು ನಗರದಲ್ಲಿ ಮತ್ತು ಜಿಲ್ಲೆಗಳಲ್ಲಿ 10 ಸಾವಿರ ಲಾಡ್ಜ್ ರೂಂಗಳಿವೆ. ಪ್ರತಿ ದಿನ ಈಗ ಶೇ.5ರಷ್ಟು ರೂಂಗಳು ಸಹ ಬುಕ್ ಆಗುತ್ತಿಲ್ಲ.