ಕರ್ನಾಟಕ

karnataka

ETV Bharat / state

ಆ ಗುಂಪು ದೊಣ್ಣೆಗಳನ್ನ ಹಿಡ್ಕೊಂಡು ಬಂತು.. ಇವರೇನೂ ಕಮ್ಮಿ ಇರಲಿಲ್ಲ.. - kannadanews

ಪಾರ್ಕಿಂಗ್ ವಿಚಾರವಾಗಿ ಎರಡು ಗುಂಪಿನ ನಡುವೆ ಗಲಾಟೆಯಾಗಿತ್ತು. ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ತಾರಕಕ್ಕೇರಿದ ಗಲಾಟೆ

By

Published : May 20, 2019, 5:50 PM IST

ಮೈಸೂರು :ಕಳೆದ ರಾತ್ರಿ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಗುಂಪಿನ ವ್ಯಾಪಾರಸ್ಥರ ನಡುವೆ ವಾಹನಗಳ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ನಡೆದಿದ್ದು, 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೂಕ್ಷ್ಮ ಪ್ರದೇಶವಾದ ಈ ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಎರಡು ಗುಂಪಿನ ಜನರು ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಸಿಕ್ಕ ಸಿಕ್ಕ ವಾಹನಗಳನ್ನು ಜಖಂಗೊಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಂಡಿ ಪೊಲೀಸರು‌ ಗಲಾಟೆಯನ್ನು ಹತೋಟಿಗೆ ತರಲು ಆರಂಭದಲ್ಲಿ ಸಾಧ್ಯವಾಗಲಿಲ್ಲ. ಹೆಚ್ವುವರಿ ಪೊಲೀಸರ ಸಹಾಯದಿಂದ ಗಲಾಟೆಯನ್ನು ಹತೋಟಿಗೆ ತರಲಾಗಿತ್ತು. ಸ್ಥಳದಲ್ಲಿ ಈಗ ಬಿಗುವಿನ ವಾತಾವರಣ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ‌

ಕ್ಷುಲ್ಲಕ ಕಾರಣಕ್ಕೆ ತಾರಕಕ್ಕೇರಿದ ಗಲಾಟೆ

ಘಟನೆ ಸಂಬಂಧ 6 ಜನರನ್ನು ಬಂಧಿಸಲಾಗಿದ್ದು, ಗಲಾಟೆಗೆ ಪ್ರಚೋದನೆ ನೀಡಿದ ಮತ್ತಷ್ಟು ಜನರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details