ಮೈಸೂರು:ದಿವಂಗತ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿರುವ ಹಿನ್ನೆಲೆ ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತಸ ವ್ಯಕ್ತಪಡಿಸಿದರು.
ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭ: ಸ್ಥಳಕ್ಕೆ ಭಾರತಿ ವಿಷ್ಣುವರ್ಧನ್ ಭೇಟಿ - KN_MYS_script_byte_KA10003
ಮೈಸೂರು ತಾಲೂಕಿನ ಉದ್ಬೂರು ಗೇಟ್ ಸಮೀಪವಿರುವ ಹಾಲಾಳು ಗ್ರಾಮದ 5 ಎಕರೆ ಪ್ರದೇಶದಲ್ಲಿ ಇಂದಿನಿಂದ ಪ್ರಾರಂಭಗೊಂಡಿರುವ ವಿಷ್ಣು ಸ್ಮಾರಕ ಕಾಮಗಾರಿ ಸ್ಥಳಕ್ಕೆ ಭಾರತಿ ವಿಷ್ಣುವರ್ಧನ್ , ಅಳಿಯ ಅನಿರುದ್ಧ್ ಹಾಗೂ ಕುಟುಂಬಸ್ಥರು ತೆರಳಿ ನಮಸ್ಕರಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.
ಮೈಸೂರು ತಾಲೂಕಿನ ಉದ್ಬೂರು ಗೇಟ್ ಸಮೀಪವಿರುವ ಹಾಲಾಳು ಗ್ರಾಮದ 5 ಎಕರೆ ಪ್ರದೇಶದಲ್ಲಿ ಇಂದಿನಿಂದ ಪ್ರಾರಂಭಗೊಂಡಿರುವ ವಿಷ್ಣು ಸ್ಮಾರಕ ಕಾಮಗಾರಿ ಸ್ಥಳಕ್ಕೆ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಹಾಗೂ ಕುಟುಂಬಸ್ಥರು ತೆರಳಿ ನಮಸ್ಕರಿಸಿದರು. ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಇರುವ ಮರಗಳನ್ನು ಕಡಿಯದೇ ಜೋಪಾನವಾಗಿ ಸ್ಥಳಾಂತರ ಮಾಡಿ ಸಂರಕ್ಷಣೆ ಮಾಡಿ ಎಂದು ಪರಿಸರ ಕಾಳಜಿ ಮೆರೆದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ವಿಷ್ಣು ಸ್ಮಾರಕ ಒಂದೇ ನಿರ್ಮಾಣ ಅಲ್ಲ, ಮ್ಯೂಸಿಯಂ, ಸಿನಿಮಾ ತರಬೇತಿ ಕೇಂದ್ರ ಬರಲಿದೆ. 11 ಕೋಟಿ ರೂ. ವೆಚ್ಚದಲ್ಲಿ ಎರಡ್ಮೂರು ವರ್ಷದಲ್ಲಿ ಇವುಗಳು ನಿರ್ಮಾಣವಾಗಲಿವೆ ಎಂದರು.
ತಾಯಿಗೆ ಹೆರಿಗೆ ಸಮಯದಲ್ಲಿ ಸಾಕಷ್ಟು ನೋವಾಗುತ್ತದೆ. ಆದರೆ ಮಗು ಅತ್ತ ನಂತರ ಹೇಗೆ ಸಂಭ್ರಮ ಪಡುತ್ತಾರೆ. ಅದೇ ರೀತಿ ನನ್ನ ಹೋರಾಟಕ್ಕೆ ಜಯ ಸಿಕ್ಕಿ ಸಂತಸವಾಗಿದೆ. ಇದು ಸರ್ಕಾರದ ಜಮೀನು ಆಗಿರುವುದರಿಂದ ಜಮೀನುದಾರರಿಗೆ ಯಾವುದೇ ಪರಿಹಾರ ನೀಡುವುದಿಲ್ಲ. ಸರ್ಕಾರ ಕೂಡ ಪರಿಹಾರ ನೀಡಲ್ಲ ಎಂದರು. ನಂತರ ಭಾರತಿ ಅವರ ಅಳಿಯ ಅನಿರುದ್ಧ್ ಮಾತನಾಡಿ, ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವುದು ವಿಷ್ಣುವರ್ಧನ್ ಅವರ ಕನಸಾಗಿತ್ತು. ಅದು ಹೀಗೆ ಈಡೇರಿದೆ. ಮುಂದಿನ ದಿನಗಳಲ್ಲಿ ಸ್ಮಾರಕ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
TAGGED:
KN_MYS_script_byte_KA10003