ಮೈಸೂರು: ಮಹಿಷಾಸುರ ರಾಕ್ಷಸನಲ್ಲ, ಕೆಟ್ಟವನಲ್ಲ. ಆತನನ್ನು ಕೆಟ್ಟವನಂತೆ ಬಿಂಬಿಸಿ ವಿಕಾರರೂಪ ನೀಡಲಾಗಿದೆ. ಆತ ಒಳ್ಳೆಯ ವ್ಯಕ್ತಿ. ಹಾಗಾಗಿ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆ ತೆಗೆದು ಆ ಸ್ಥಳದಲ್ಲಿ ಬೌದ್ಧ ಬಿಕ್ಕುವಿನ ಮೂರ್ತಿ ಸ್ಥಾಪಿಸಬೇಕೆಂದು ಚಿಂತಕ ಪ್ರೊ. ಕೆ.ಎಸ್.ಭಗವಾನ್ ಒತ್ತಾಯಿಸಿದರು.
ಮಹಿಷಾಸುರ ಜನಾನುರಾಗಿ ರಾಜ, ಆತನನ್ನು ಕೆಟ್ಟವನಂತೆ ಬಿಂಬಿಸಲಾಗಿದೆ: ಪ್ರೊ. ಭಗವಾನ್ - ಪ್ರೊ.ಕೆ.ಎಸ್.ಭಗವಾನ್
ಮಹಿಷಾಸುರ ರಾಕ್ಷಸನಲ್ಲ, ಕೆಟ್ಟವನಲ್ಲ, ಮಹಿಷಾ ಒಳ್ಳೆಯ ರಾಜ. ಈತ ಬೌದ್ಧ ಧರ್ಮದ ಎಲ್ಲಾ ತತ್ವ, ಸಿದ್ಧಾಂತಗಳನ್ನು ಪಾಲಿಸಿದದ್ದರಿಂದ ಮೈಸೂರು ಮಾನವೀಯ ರಾಜ್ಯವಾಗಿ ಬೆಳೆದಿದೆ. ಒಳ್ಳೆಯ ವ್ಯಕ್ತಿತ್ವವುಳ್ಳ ವ್ಯಕ್ತಿಯನ್ನು ಕೆಟ್ಟ ಕೆಟ್ಟದಾಗಿ ಚಿತ್ರಿಸಿ ವಿಕಾರ ರೂಪ ನೀಡಿ ಚಾಮುಂಡಿ ಬೆಟ್ಟದಲ್ಲಿ ಇಟ್ಟಿದ್ದಾರೆ. ಹಾಗಾಗಿ ಚಾಮುಂಡಿ ಬೆಟ್ಟದ ಮೇಲಿರುವ ಮಹಿಷಾಸುರನ ವಿಗ್ರಹವನ್ನು ತೆಗೆದು ಹಾಕಿ ಅಲ್ಲಿ ಬೌದ್ಧ ಬಿಕ್ಕುವಿನ ವಿಗ್ರಹ ನಿರ್ಮಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಿಷಾಸುರ ಕೆಟ್ಟವನಾಗಿದ್ದರೆ ಮಹಿಷಾ ಮಂಡಲ ಎಂದು ಕೆರೆಯುತ್ತಿದ್ರಾ? ಅವನ ಹೆಸರಿನಲ್ಲಿ ಈ ಮೈಸೂರನ್ನು ಉಳಿಸಿಕೊಳ್ಳುತ್ತಿದ್ರಾ? ಮಹಿಷಾ ಒಳ್ಳೆಯ ರಾಜ. ಈತ ಬೌದ್ಧ ಧರ್ಮದ ಎಲ್ಲಾ ತತ್ವ, ಸಿದ್ಧಾಂತಗಳನ್ನು ಪಾಲಿಸಿದದ್ದರಿಂದ ಮೈಸೂರು ಮಾನವೀಯ ರಾಜ್ಯವಾಗಿ ಬೆಳೆದಿದೆ. ಆದರೆ ಈ ಒಳ್ಳೆಯ ವ್ಯಕ್ತಿತ್ವವುಳ್ಳ ವ್ಯಕ್ತಿಯನ್ನು ಕೆಟ್ಟ ಕೆಟ್ಟದಾಗಿ ಚಿತ್ರಿಸಿ ವಿಕಾರ ರೂಪ ನೀಡಿ ಚಾಮುಂಡಿ ಬೆಟ್ಟದಲ್ಲಿ ಇಟ್ಟಿದ್ದಾರೆ. ಹಾಗಾಗಿ ಚಾಮುಂಡಿ ಬೆಟ್ಟದ ಮೇಲಿರುವ ಮಹಿಷಾಸುರ ವಿಗ್ರಹವನ್ನು ತೆಗೆದು ಹಾಕಿ ಅಲ್ಲಿ ಬೌದ್ಧ ಬಿಕ್ಕುವಿನ ವಿಗ್ರಹವನ್ನು ನಿರ್ಮಿಸಬೇಕೆಂದು ಆಗ್ರಹಿಸಿದರು.
ಈತ ಒಬ್ಬ ಬೌದ್ಧ ಬಿಕ್ಕು. ಅಶೋಕನ ಕಾಲದಿಂದಲೂ ಈತ ಉತ್ತಮ ಆಡಳಿತ ಮಾಡಿದ್ದಾನೆ. ಆದರೆ ಈತನಿಗೆ ವಿಕಾರ ರೂಪ ನೀಡಿ ಅಲ್ಲಿಟ್ಟಿರುವುದು ಸರಿಯಲ್ಲ. ಇದು ನಮ್ಮ ಸಂಸ್ಕೃತಿಗೆ ವಿರೋಧವಾಗಿದೆ. ಹಾಗಾಗಿ ವಿಗ್ರಹ ತೆಗೆದು ಹಾಕಲು ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳತ್ತೇವೆ ಎಂದರು.