ಮೈಸೂರು:ನಾಗರಿಕತೆ ನಂಬಿ ಸಂಸ್ಕೃತಿ ಮರೆಯುತ್ತಿದ್ದೇವೆ. ಆದ್ದರಿಂದ ಬದುಕು ನರಕದತ್ತ ಸಾಗುತ್ತಿದೆ ಎಂದು ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಾಗರಿಕತೆ ನಂಬಿ ಸಂಸ್ಕೃತಿ ಮರೆಯುತ್ತಿದ್ದೇವೆ: ಡಾ.ಪಂಡಿತಾರಾಧ್ಯ ಸ್ವಾಮೀಜಿ - ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ
ಪ್ರಸ್ತುತ ಕಾಲಮಾನದಲ್ಲಿ ನಾಗರಿಕತೆ ನಂಬುವುದರಿಂದ ಸಂಸ್ಕೃತಿ ಮರೆಯುತ್ತಿದ್ದೇವೆ. ಈ ಕಾರಣಕ್ಕಾಗಿಯೇ ನಮ್ಮ ಜೀವನ ನರಕದಂತೆ ಆಗಿದೆ ಎಂದು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಹಮತ ವೇದಿಕೆಯಿಂದ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಮತ್ತೆ ಕಲ್ಯಾಣ ಎಂಬ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ನಾಗರಿಕತೆ ನಾಗಲೋಟವನ್ನು ಸ್ವರ್ಗವೆಂದು ಭಾವಿಸಿದ್ದೇವೆ. ಆದರೆ, ಶರಣರು, ನಡೆ-ನುಡಿಯೇ ಶುದ್ಧವಾಗಿದ್ದರೆ ಅದೇ ಸ್ವರ್ಗವೆಂದು ಭಾವಿಸಿದ್ದರು. ಶರಣರ ಸಿದ್ಧಾಂತವೇ ಬದುಕಿನ ಪಾಠ ಕಲಿಸುತ್ತದೆ ಎಂದರು. ಬಹಿರಂಗ ಹಾಗೂ ಅಂತರಂಗವಾಗಿ ಶುದ್ಧರಾಗಿ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಬೇಕು ಎಂದು ಕರೆ ಕೊಟ್ಟರು.
ಅನುಭವ ಮಂಟಪದ ಮೂಲಕ ಬಸವಣ್ಣನವರು ಮೌಢ್ಯತೆ ತೊಲಗಿಸಿ, ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಆಶಯ ಹೊಂದಿದ್ದರು. ಅದನ್ನು ನಾವೆಲ್ಲ ಮಾಡಿ ತೋರಿಸಬೇಕು ಎಂದರು.