ಮೈಸೂರು:ನಾಡಹಬ್ಬ ಮೈಸೂರು ದಸರಾ-2020 ಕಾರ್ಯಕಾರಿ ಸಭೆ ಅರಮನೆ ಆವರಣದಲ್ಲಿರುವ ಆಡಳಿತ ಕಚೇರಿಯಲ್ಲಿ ಆರಂಭವಾಗಿದೆ.
ಸರಳ ದಸರಾ ಕಾರ್ಯಕಾರಿ ಸಭೆ ಆರಂಭ - Meeting of simple Dasara
ಮೈಸೂರು ದಸರಾ-2020ರ ಕಾರ್ಯಕಾರಿ ಸಭೆಯು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಆರಂಭವಾಗಿದೆ. ಈ ಸಭೆಯಲ್ಲಿ ಸರಳ ದಸರಾದ ರೂಪುರೇಷೆಗಳ ಚರ್ಚೆ, ದಸರಾ ಉದ್ಘಾಟಕರು, ಗಜಪಯಣ ಹಾಗೂ ಸರಳ ಜಂಬೂಸವಾರಿಯ ರೂಪುರೇಷೆಗಳು ಅಂತಿಮವಾಗಲಿದೆ.

ದಸರಾ ಕಾರ್ಯಕಾರಿ ಸಭೆ
ಈ ಬಾರಿ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಲು ತೀರ್ಮಾನ ಮಾಡಲಾಗಿದ್ದು , ಈ ಹಿನ್ನಲೆಯಲ್ಲಿ ಇಂದು ಅರಮನೆ ಆವರಣದಲ್ಲಿರುವ ಅರಮನೆ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಡೆಯುತ್ತಿದೆ.
ಸರಳ ದಸರಾ ಕಾರ್ಯಕಾರಿ ಸಭೆ
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಸಂಸದರು, ಶಾಸಕರು, ಮೇಯರ್ ಹಾಗೂ ಪೋಲಿಸ್ ಕಮಿಷನರ್ ಭಾಗಿಯಾಗಿದ್ದಾರೆ. ಈ ಸಭೆಯಲ್ಲಿ ಸರಳ ದಸರಾದ ರೂಪುರೇಷೆಗಳ ಚರ್ಚೆ, ದಸರಾ ಉದ್ಘಾಟಕರು, ಗಜಪಯಣ ಹಾಗೂ ಸರಳ ಜಂಬೂಸವಾರಿಯ ರೂಪುರೇಷೆಗಳು ಅಂತಿಮವಾಗಲಿದೆ.