ಮೈಸೂರು: ಹೊಲದಲ್ಲಿ ದನ ಮೇಯಿಸುತ್ತಿದ್ದ ರೈತರ ಮೇಲೆ ಹಠಾತ್ತಾನೆ ಹೆಜ್ಜೇನು ದಾಳಿ ಮಾಡಿರುವ ಘಟನೆ ಎಚ್ ಡಿ.ಕೋಟೆ ತಾಲೂಕಿನ ಹೊಸತೊರವಳ್ಳಿ ಹಾಗೂ ಬೆಳಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೆಜ್ಜೇನು ದಾಳಿಗೆ ಒಬ್ಬ ರೈತ ಸಾವನ್ನಪ್ಪಿದ್ದು, ಮತ್ತಿಬ್ಬರು ನಿತ್ರಾಣಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಚ್ ಡಿ. ಕೋಟೆ ತಾಲೂಕಿನ ಹೊಸತೊರವಳ್ಳಿ ಮತ್ತು ಬೆಳಗನಹಳ್ಳಿ ಸಮೀಪದಲ್ಲಿ, ದನ ಮೇಯಿಸುತ್ತಿರುವ ರೈತರ ಮೇಲೆ ಹೆಜ್ಜೇನು ಹುಳುಗಳ ಹಿಂಡು ಹಠಾತ್ತನೆ ದಾಳಿ ನಡೆಸಿವೆ. ಹೆಜ್ಜೇನು ಹುಳುಗಳ ಮೊದಲು ಚಿಕ್ಕಮಾಲೇಗೌಡನ (65) ಮೇಲೆ, ನಂತರ ಜಮೀನಿಗೆ ನೀರು ಹಾಯಿಸಲು ತೆರಳಿದ್ದ ಬೀರೇಗೌಡ ಮತ್ತು ಶಂಕರನಾಯ್ಕ ಎಂಬ ರೈತರ ಮೇಲೆ ದಾಳಿ ನಡೆಸಿವೆ. ಜೇನುಗಳ ದಾಳಿಯಿಂದ ಅಸ್ವಸ್ತಗೊಂಡಿದ್ದವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಚಾಮರಾಜಗರದಲ್ಲಿ ಪ್ರತಿಭಟನಾಕಾರರ ಮೇಲೆ ಜೇನು ದಾಳಿ.. ಓಟಕಿತ್ತ ಜನ
ಮಾರ್ಗ ಮಧ್ಯೆ ಒಬ್ಬ ರೈತ ಸಾವು :ಹೆಜ್ಜೇನು ದಾಳಿಗೆ ಒಳಗಾಗಿದ್ದ ಮೂವರು ರೈತರನ್ನು ಆಸ್ಪತ್ರೆಗೆ ಸೇರಿಸಲು ಕರೆದುಕೊಂಡು ಹೋಗುವಾಗ, ಮಾರ್ಗ ಮಧ್ಯದಲ್ಲಿ, ಚಿಕ್ಕಮಾಲೇಗೌಡ (65) ಎಂಬ ರೈತ ಹೆಜ್ಜೇನು ದಾಳಿಗೆ ತೀವ್ರ ನಿತ್ರಾಣಗೊಂಡು ಸಾವನ್ನಪ್ಪಿದರೇ, ಇನ್ನುಳಿದ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹೆಜ್ಜೇನು ಹಿಂಡಿನ ದಾಳಿಯಿಂದ ಹೊಸತೊರವಳ್ಳಿ, ಬೆಳಗನಹಳ್ಳಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಜನರು ಜಮೀನಿನ ಕಡೆ ಹೋಗಲು ಭಯಪಡುತ್ತಿದ್ದಾರೆ.