ಮೈಸೂರು: ಕೋವಿಡ್ನಿಂದ ನರಳುತ್ತಿರುವ ಜನರ ಸಂಕಷ್ಟವನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು, ಫೇಸ್ಬುಕ್ ನಕಲಿ ಅಕೌಂಟ್ ಕ್ರಿಯೇಟ್ ಮಾಡಿ, ಫೇಕ್ ರಿಕ್ವೆಸ್ಟ್ ಕಳಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ಘಟನೆ ಇತ್ತೀಚೆಗೆ ತೀರಾ ಹೆಚ್ಚಾಗಿದೆ.
ಹೌದು, ಇಂತಹುದೇ ಘಟನೆ ಮೈಸೂರಿನಲ್ಲಿ ನಡೆದಿದೆ. ಇಟ್ಟಿಗೆ ಗೂಡಿನ ನಿವಾಸಿ ಪ್ರಕಾಶ್ ಎಂಬುವವರ ನಕಲಿ ಅಕೌಂಟ್ ಸೃಷ್ಟಿಸಿ, ಪ್ರಕಾಶ್ ಅವರ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಫೇಕ್ ರಿಕ್ವೆಸ್ಟ್ ಕಳುಹಿಸಿ, ಅಕ್ಸೆಪ್ಟ್ ಮಾಡಿದ್ರೆ ಚಾಟಿಂಗ್ ಶುರು ಮಾಡಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಆಸ್ಪತ್ರೆಯಲ್ಲಿದ್ದೇನೆ ತುರ್ತಾಗಿ ಹಣ ಬೇಕಿದೆ ಎಂದು ಒತ್ತಡ ಹಾಕುತ್ತಾರೆ. ನಕಲಿ ಅಕೌಂಟ್ ಬಗ್ಗೆ ಎಚ್ಚೆತ್ತ ಪ್ರಕಾಶ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಇಮೇಲ್ ಮೂಲಕ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಕಲಿ ಖಾತೆಯ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ.