ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಪೊಲೀಸ್​ ಅಧಿಕಾರಿಯ ಮಗಳು ಆತ್ಮಹತ್ಯೆ - ಪೊಲೀಸ್​ ಅಧಿಕಾರಿ ಮಗಳು ಆತ್ಮಹತ್ಯೆ

ಬಿಕಾಂ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

bcom-student-committs-suicide-in-mysore
ಮೈಸೂರು : ನೇಣು ಬಿಗಿದುಕೊಂಡು ಪೊಲೀಸ್​ ಅಧಿಕಾರಿ ಮಗಳು ಆತ್ಮಹತ್ಯೆ

By

Published : Dec 18, 2022, 8:12 PM IST

Updated : Dec 19, 2022, 9:20 AM IST

ಮೈಸೂರು : ಬಿಕಾಂ ವಿದ್ಯಾರ್ಥಿನಿಯಾಗಿರುವ ಪೊಲೀಸ್​ ಅಧಿಕಾರಿಯ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಪೊಲೀಸ್ ವಿಶೇಷ ವಿಭಾಗದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೋಪಿನಾಥ್ ಅವರ ಪುತ್ರಿ ಗಿರಿಜಾಲಕ್ಷ್ಮಿ (19) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ.

ಇಲ್ಲಿನ ಜಲಪುರಿ ಪೊಲೀಸ್ ವಸತಿಗೃಹದ ಸಿ.ಬ್ಲಾಕ್ ನಲ್ಲಿ ಗೋಪಿನಾಥ್ ನೆಲೆಸಿದ್ದು, ಭಾನುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಗಿರಿಜಾಲಕ್ಷ್ಮಿ ಸಾವಿಗೆ ಶರಣಾಗಿದ್ದಾರೆ. ಮನೆಯವರು ಸಂಜೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ತಕ್ಷಣವೇ ಮಗಳನ್ನು ಸಮೀಪದ ಗೋಪಾಲಗೌಡ ಆಸ್ಪತ್ರೆಗೆ ಸಾಗಿಸಿದ್ದು, ಅಷ್ಟರಲ್ಲೇ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಗಿರಿಜಾಲಕ್ಷ್ಮಿ ನಗರದ ಟೆರೇಷಿಯನ್ ಕಾಲೇಜಿನಲ್ಲಿ ಪ್ರಥಮ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಮೃತದೇಹವನ್ನು ಕೆ.ಆರ್. ಆಸ್ಪತ್ರೆಯಲ್ಲಿ ಇರಿಸಿದ್ದು, ನಾಳೆ‌‌ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

ಐದು ದಿನಗಳ ಹಿಂದೆಯಷ್ಟೇ ಗೋಪಿನಾಥ್ ಅವರ ಅಣ್ಣ ವಿಧಿವಶರಾಗಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಈ ಬಗ್ಗೆ ನಜರ್ ಬಾದ್ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ :ಗಂಡನ ಸಾವಿನಿಂದ ಖಿನ್ನತೆ.. ಗೃಹಿಣಿ ಆತ್ಮಹತ್ಯೆ, ಒಂದೂವರೆ ವರ್ಷದ ಮಗು ಅನಾಥ

Last Updated : Dec 19, 2022, 9:20 AM IST

ABOUT THE AUTHOR

...view details