ಕರ್ನಾಟಕ

karnataka

ETV Bharat / state

ಬಾರ್​ಗೆ ಬಂದು ಕಂಠಪೂರ್ತಿ ಕುಡಿದ.. ಬಿಲ್​ ಕೊಟ್ಟ ಸಪ್ಲೈಯರ್​ಗೆ ಚಾಕುವಿನಿಂದ ಇರಿದು ಕೊಂದ - Bar supplier murder in mysore

ಬಾರ್​ನಲ್ಲಿ ಕಂಠಪೂರ್ತಿ ಕುಡಿದ ಟ್ಯಾಕ್ಸಿ ಚಾಲಕ- ಬಿಲ್​ ವಿಚಾರಕ್ಕೆ ತಗಾದೆ ತೆಗೆದು ಸಪ್ಲೈಯರ್​ಗೆ ಚಾಕುವಿನಿಂದ ಇರಿದ- ಮೈಸೂರಿನಲ್ಲಿ ಪ್ರಕರಣ

bar-supplier-stabbed-to-death-in-mysore
ಬಾರ್​ಗೆ ಬಂದು ಕಂಠಪೂರ್ತಿ ಕುಡಿದ.. ಬಿಲ್​ ಕೊಟ್ಟ ಸಪ್ಲೇಯರ್​ಗೆ ಚಾಕುವಿನಿಂದ ಇರಿದ

By

Published : Jul 21, 2022, 1:38 PM IST

ಮೈಸೂರು: ಮದ್ಯ ಸೇವಿಸಿದ ಬಳಿಕ ಗ್ರಾಹಕನಿಗೆ ಬಿಲ್​ ಹಣ ಕೇಳಿದ ಸಪ್ಲೈಯರ್​ನ್ನು ಟ್ಯಾಕ್ಸಿ ಚಾಲಕ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಪ್ರಕರಣ ನಗರದ ಮಾನಂದವಾಡಿ ರಸ್ತೆಯಲ್ಲಿರುವ ಬಾರ್​​ವೊಂದರಲ್ಲಿ ಬುಧವಾರ ರಾತ್ರಿ ನಡೆದಿದೆ. ನಂದಕುಮಾರ್ (25) ಎಂಬಾತ ಮೃತ ಸಪ್ಲೈಯರ್.

ಸುಧಾಕರ್ ಎಂಬಾತ ಕೊಲೆಗೈದ ಆರೋಪಿ ಟ್ಯಾಕ್ಸಿ ಡ್ರೈವರ್ ಆಗಿದ್ದಾನೆ. ಬಾರ್​​ಗೆ ಬಂದ ಆರೋಪಿಯು ಕಂಠಪೂರ್ತಿ ಕುಡಿದಿದ್ದು, ಬಳಿಕ ಸಪ್ಲೇಯರ್ ಬಿಲ್ ಕೊಟ್ಟಾಗ ಹಣ ಕೊಡುವುದಿಲ್ಲ ಎಂದು ತಗಾದೆ ತೆಗೆದಿದ್ದಾನೆ. ಆಗ ಟ್ಯಾಕ್ಸಿ ಡ್ರೈವರ್​​ನನ್ನು ಅಲ್ಲಿದ್ದ ಬಾರ್​​ನ ಸಿಬ್ಬಂದಿ ಸಮಾಧಾನಪಡಿಸಿ ಹೊರಗೆ ಕಳುಹಿಸಿದ್ದರು. ಆದರೆ ಕೆಲ ಸಮಯದ ನಂತರ ಚಾಕು ತೆಗೆದುಕೊಂಡು ಬಾರ್​ಗೆ ಬಂದ ಸುಧಾಕರ್ ಏಕಾಏಕಿ ಸಪ್ಲೈಯರ್​​ ನಂದಕುಮಾರ್​ಗೆ ಇರಿದು ಪರಾರಿಯಾಗಿದ್ದಾನೆ.

ತಕ್ಷಣ ಬಾರ್ ಸಪ್ಲೈಯರ್​ಅನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಮಾರ್ಗ ಮಧ್ಯ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ವಿದ್ಯಾರಣ್ಯಪುರ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಟ್ಯಾಕ್ಸಿ ಡ್ರೈವರ್ ಪತ್ತೆಗಾಗಿ ಖಾಕಿ ಬಲೆ ಬೀಸಿದೆ.

ಇದನ್ನೂ ಓದಿ:ವಿಜಯಪುರದಲ್ಲಿ ಮಗು ಕಳ್ಳತನಕ್ಕೆ ಯತ್ನಿಸಿದ ಕಿರಾತಕ.. ಕಳ್ಳನನ್ನು ಬೆನ್ನಟ್ಟಿ ಪುತ್ರನನ್ನು ರಕ್ಷಿಸಿದ ತಾಯಿ

ABOUT THE AUTHOR

...view details