ಮೈಸೂರು: 10-15 ವರ್ಷಗಳಿಂದ ತೆರಿಗೆ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳು, ಮನೆಗಳು ಸೇರಿದಂತೆ ಎಲ್ಲಾ ಆಸ್ತಿಗಳ ತೆರಿಗೆ ಪಾವತಿಸುವಂತೆ ಪಾಲಿಕೆಯಿಂದ ನಿರಂತರ ನೋಟಿಸ್ ನೀಡಿದರೂ ಕೂಡ ತೆರಿಗೆ ಪಾವತಿ ಮಾಡದವರಿಗೆ ಬಿಸಿಮುಟ್ಟಿಸುವ ಸಲುವಾಗಿ ಮೈಸೂರು ಮಹಾನಗರ ಪಾಲಿಕೆ (Mysuru Mahanagara Palike ) ವತಿಯಿಂದ ಬ್ಯಾನರ್ ಚಳವಳಿ (Banner Movement) ಆರಂಭಿಸಲಾಗಿದೆ.
ಪಾಲಿಕೆಯ 9 ವಲಯಗಳಲ್ಲಿಯೂ ಆಯಾ ವಲಯ ಕಚೇರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದ್ದು, 10-15 ವರ್ಷಗಳಿಂದ ತೆರಿಗೆ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡ, ಮನೆ ಸೇರಿದಂತೆ ಎಲ್ಲಾ ಆಸ್ತಿಗಳ ಮುಂದೆ ಅಧಿಕಾರಿಗಳು ಬ್ಯಾನರ್ ಅಳವಡಿಸುತ್ತಿದ್ದಾರೆ.
ವಲಯ 3 ಮತ್ತು 4 ರಲ್ಲಿ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಲ್ಯಾಣ ಮಂಟಪಗಳು, ಖಾಸಗಿ ಆಸ್ಪತ್ರೆ, ವಾಣಿಜ್ಯ ಕಟ್ಟಡಗಳು, ಮನೆಗಳ ಮುಂದೆ ಬ್ಯಾನರ್ ಅಳವಡಿಸಲು ಆರಂಭಿಸಲಾಗಿದೆ. ಕೆಲವರು ಬ್ಯಾನರ್ ಕಟ್ಟದಂತೆ ಮನವಿ ಮಾಡಿದ್ದು, ತೆರಿಗೆ ಪಾವತಿಸಲು ಸಮಯಾವಕಾಶ ಕೋರಿದ್ದಾರೆ. ತೆರಿಗೆ ಬಾಕಿ ಉಳಿಸಿಕೊಂಡಿರುವ ಖಾಸಗಿ ಆಸ್ಪತ್ರೆಯೊಂದರ ಮುಂದೆಯೂ ಬ್ಯಾನರ್ ಕಟ್ಟಿದ್ದು, ಪೆಟ್ರೋಲ್ ಪಂಪ್ ವೊಂದನ್ನು ಮುಚ್ಚಿಸಲು ಕ್ರಮಕೈಗೊಳ್ಳಲಾಗಿದೆ. ದೊಡ್ಡ ಮೊತ್ತದ ತೆರಿಗೆ ಬಾಕಿಯುಳಿಸಿಕೊಂಡವರಿಂದ ಮೊದಲು ವಸೂಲಿಗೆ ಕ್ರಮವಹಿಸಲಾಗಿದೆ.
ಬ್ಯಾನರ್ನಲ್ಲೇನಿದೆ?: