ಮೈಸೂರು: ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, 96 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ. ಅಲ್ಲದೆ ನಿಷೇಧವಾಗಿರುವ 500 ಮತ್ತು 1000 ರೂ ಹಳೆಯ ನೋಟುಗಳು ಹುಂಡಿಯಲ್ಲಿ ಕಂಡುಬಂದಿವೆ.
ನಂಜುಂಡೇಶ್ವರನ ಹುಂಡಿಗೆ ನಿಷೇಧಿತ ಹಳೆ ನೋಟುಗಳನ್ನು ಹಾಕಿದ ಭಕ್ತರು..! - ನಂಜುಂಡೇಶ್ವರ ದೇವಾಲಯದಲ್ಲಿ ನಿಷೇಧಿತ ನೋಟು ಪತ್ತೆ
ಕೇಂದ್ರ ಸರ್ಕಾರ 1000 ಮತ್ತು 500 ರೂಪಾಯಿ ಮುಖ ಬೆಲೆಯ ನೋಟುಗಳನ್ನ ರದ್ದು ಮಾಡಿ ಮೂರು ವರ್ಷ ಕಳೆದರೂ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹುಂಡಿಯಲ್ಲಿ ಹಳೆ ನೋಟುಗಳು ಪತ್ತೆಯಾಗಿವೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, ಸುಮಾರು 96 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ಆಶ್ಚರ್ಯಕರ ಸಂಗತಿ ಎಂದರೆ 3 ವರ್ಷಗಳ ಹಿಂದೆ ನಿಷೇಧವಾಗಿರುವ 500 ಮತ್ತು 1000 ರೂಪಾಯಿ ಹಳೆ ನೋಟುಗಳು ಸಿಕ್ಕಿವೆ.
ಈ ಮೂಲಕ ಜನರು ಇನ್ನೂ ಹಳೆಯ ನೋಟುಗಳನ್ನು ಸಂಗ್ರಹಿಸಿರುವ ಸಂಗತಿ ಬೆಳಕಿಗೆ ಬಂದಿದೆ. ದೇವರ ಸನ್ನಿಧಿಗೆ 34 ಗ್ರಾಂ ಚಿನ್ನ, 1 ಕೆಜಿ 800 ಗ್ರಾಂ ಬೆಳ್ಳಿ ಹಾಗೂ 8 ವಿದೇಶಿ ಕರೆನ್ಸಿಗಳು ಸಂಗ್ರಹವಾಗಿವೆ. ಕಳೆದ ತಿಂಗಳಿಗಿಂತ ದೇವಾಲಯಕ್ಕೆ 10 ಲಕ್ಷ ರೂಪಾಯಿ ಆದಾಯ ಹೆಚ್ಚುವರಿಯಾಗಿದೆ ಎಂದು ದೇವಸ್ಥಾನದ ಮೂಲಗಳಿಂದ ತಿಳಿದುಬಂದಿದೆ.