ಕರ್ನಾಟಕ

karnataka

ETV Bharat / state

ಮೈಸೂರಿನ ಲಾಡ್ಜ್‌ನಲ್ಲಿ ಬೆಂಗಳೂರಿನ ಉದ್ಯಮಿ ಆತ್ಮಹತ್ಯೆ, ಪತ್ನಿ ನಾಪತ್ತೆ? - ಬೆಂಗಳೂರಿನ ಉದ್ಯಮಿಯೋರ್ವರು ಮೈಸೂರಿನ ಲಾಡ್ಜ್‌ ನಲ್ಲಿ ಸಾವು

ಬೆಂಗಳೂರಿನ ಉದ್ಯಮಿಯೊಬ್ಬರ ಶವ ಮೈಸೂರಿನ ಲಾಡ್ಜ್‌ವೊಂದರಲ್ಲಿ ಪತ್ತೆಯಾಗಿದೆ. ಅತಿಯಾದ ಇನ್ಸುಲಿನ್‌ನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

Bangalore businessman died
ಮೈಸೂರಿನ ಲಾಡ್ಜ್‌ನಲ್ಲಿ ಬೆಂಗಳೂರಿನ ಉದ್ಯಮಿ ಸಾವು

By

Published : Jan 3, 2021, 7:02 PM IST

ಮೈಸೂರು: ಬೆಂಗಳೂರಿನ ಉದ್ಯಮಿಯೋರ್ವರ ಮೃತದೇಹ ಮೈಸೂರಿನ ಲಾಡ್ಜ್‌ವೊಂದರಲ್ಲಿ ಪತ್ತೆಯಾಗಿದೆ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಉಮಾಶಂಕರ್ (45) ಮೃತ ದುರ್ದೈವಿ. ಉಮಾಶಂಕರ್ ಜೊತೆ ಬಂದಿದ್ದ ಆತನ ಪತ್ನಿ ಕವಿತಾ ನಾಪತ್ತೆಯಾಗಿದ್ದು, ಲಾಡ್ಜ್‌ನಲ್ಲಿ ಇನ್ಸುಲಿನ್ ಹಾಗೂ ಔಷಧಿ ಬಾಟಲ್‌, ಡೆತ್‌ನೋಟ್ ಪತ್ತೆಯಾಗಿದೆ.

'ನಾವು ಅತಿಯಾದ ಸಾಲ ಮಾಡಿಕೊಂಡಿದ್ದು, ಸಾಲ ಹಿಂತಿರುಗಿಸುವಂತೆ ಕೆಲವರು ಪೀಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ' ಎಂಬ ವಿಚಾರ ಡೆತ್‌ನೋಟ್‌ನಲ್ಲಿದೆ.

ನಾಪತ್ತೆಯಾಗಿರುವ ಪತ್ನಿ ಕವಿತಾಗಾಗಿ ಹುಡುಕಾಟ ಮುಂದುವರೆದಿದೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details