ಕರ್ನಾಟಕ

karnataka

ETV Bharat / state

ಕೊರೊನಾ ಮುಂಜಾಗ್ರತಾ ಕ್ರಮಗಳ ಮೂಲಕ ನಾಳೆಯಿಂದ ಬಂಡೀಪುರ ಸಫಾರಿ ಓಪನ್... - ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸುದ್ದಿ 2021

ಕೊರೊನಾ ಮುಂಜಾಗ್ರತಾ ಕ್ರಮಗಳ ಮೂಲಕ ಸಫಾರಿ ಪುನಾರಂಭವಾಗಲಿದ್ದು, ಪ್ರವಾಸಿಗರು ಹಾಗೂ ವನ್ಯ ಪ್ರಿಯರು ಕೊರೊನಾ ಮಾರ್ಗಸೂಚಿ ಅನುಸರಿಸುವಂತೆ ಪ್ರಕಟಣೆ ಮೂಲಕ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ ತಿಳಿಸಿದ್ದಾರೆ.

bandipur-safari-open
ಬಂಡೀಪುರ ರಾಷ್ಟ್ರೀಯ ಉದ್ಯಾನವನ

By

Published : Jun 29, 2021, 7:17 PM IST

Updated : Jun 29, 2021, 7:25 PM IST

ಮೈಸೂರು/ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಾಳೆಯಿಂದ(ಜೂನ್ 30) ಸಫಾರಿ ಆರಂಭವಾಗುತ್ತಿದ್ದು, ವನ್ಯಜೀವಿ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಚಟುವಟಿಕೆಗಳು ಬಂದ್ ಆಗಿದ್ದವು. ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ ಇಳಿಮುಖವಾದ ಕಾರಣ, ಮತ್ತೆ ಪ್ರವಾಸೋದ್ಯಮ ಚಟುವಟಿಕೆಗಳ ಪುನಾರಂಭಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಪ್ರಕಟಣೆ

ಬಂಡೀಪುರ ಹುಲಿಯೋಜನೆ ವ್ಯಾಪ್ತಿಯ ಪ್ರವಾಸೋದ್ಯಮ ಚಟುವಟಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಾಳೆಯಿಂದ ಬಂಡೀಪುರ ಸಫಾರಿ ಪುನಾರಂಭವಾಗಲಿದೆ. ಅಲ್ಲದೇ ಸ್ಥಳದಲ್ಲೇ ಟಿಕೆಟ್​ ವ್ಯವಸ್ಥೆಯನ್ನೂ ಮಾಡಲಾಗಿದೆ.

ಜುಲೈ 5ರಿಂದ ಆನ್​ಲೈನ್​ ಬುಕ್ಕಿಂಗ್ ಸೇವೆ ಲಭ್ಯವಾಗಲಿದೆ. ಕೊರೊನಾ ಮುಂಜಾಗ್ರತಾ ಕ್ರಮಗಳ ಮೂಲಕ ಸಫಾರಿ ಪುನಾರಂಭವಾಗಲಿದ್ದು, ಪ್ರವಾಸಿಗರು ಹಾಗೂ ವನ್ಯ ಪ್ರಿಯರು ಕೊರೊನಾ ಮಾರ್ಗಸೂಚಿ ಅನುಸರಿಸುವಂತೆ ಪ್ರಕಟಣೆ ಮೂಲಕ ಬಂಡೀಪುರ ಹುಲಿಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ ತಿಳಿಸಿದ್ದಾರೆ.

ಓದಿ:ಕೃಷ್ಣಾ ನದಿ ದುರಂತ: ಜಿಲ್ಲಾ ಉಸ್ತುವಾರಿ ಸಚಿವ ಸ್ಥಳಕ್ಕೆ ಬೇಟಿ ನೀಡುವಂತೆ ಅಥಣಿ ಕಾಂಗ್ರೆಸ್ ಆಗ್ರಹ

Last Updated : Jun 29, 2021, 7:25 PM IST

ABOUT THE AUTHOR

...view details