ಕರ್ನಾಟಕ

karnataka

ETV Bharat / state

33 ವರ್ಷಗಳಿಂದ ವಕೀಲ ವೃತ್ತಿ ಮಾಡಿ ಯಾಮಾರಿಸಿದ್ದ.. ಜೈಲಿನಲ್ಲಿದ್ದ ನಕಲಿ ಲಾಯರ್‌ಗೆ ಬೇಲ್‌.. - mysore news

ಹುಣಸೂರಿನ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿದ್ದ. ಇದಲ್ಲದೆ, ಹುಣಸೂರು ವಕೀಲರ ಸಂಘದಲ್ಲಿ ಅಧ್ಯಕ್ಷ ಕೂಡ ಆಗಿದ್ದ.

ನಕಲಿ ನ್ಯಾಯವಾದಿಗೆ ಜಾಮೀನು ಮಂಜೂರು

By

Published : Aug 27, 2019, 7:40 AM IST

ಮೈಸೂರು: ನಕಲಿ ವಕೀಲನೋರ್ವನಿಗೆ ರಾಜ್ಯ ಉಚ್ಛ ನ್ಯಾಯಾಲಯ ಜಾಮೀನು ಮಂಜೂರು ನೀಡಿದೆ.

ಎಂ ವಿಲಿಯಮ್ಸ್ ಎಂಬಆರೋಪಿಗೆ ಬೇಲ್‌ ಸಿಕ್ಕಿದೆ. ಈತ33 ವರ್ಷಗಳಿಂದ ವಕೀಲನೆಂದು ಹೇಳಿಕೊಂಡು ಹುಣಸೂರಿನ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳಲ್ಲಿ ತನ್ನ ಕಕ್ಷಿದಾರರ ಪರ ವಾದ ಮಂಡಿಸಿದ್ದ. ಇದಲ್ಲದೆ, ಹುಣಸೂರು ವಕೀಲರ ಸಂಘದಲ್ಲಿ ಅಧ್ಯಕ್ಷ ಕೂಡ ಆಗಿದ್ದ.

ಈತನ ವಿರುದ್ಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ 2019 ಮೇ 29 ರಂದು ಪ್ರಕರಣ ದಾಖಲಾದ ಮೇಲೆ ಬಂಧಿಸಲಾಗಿತ್ತು. ಈಗ ಹೈಕೋರ್ಟ್ ಈತನಿಗೆ ಜಾಮೀನು ನೀಡಿ ಆದೇಶಿಸಿದೆ. ಈಗ ಆರೋಪಿ ಬೇಲ್ ಮೇಲೆ ಹೊರ ಬಂದಿದ್ದಾನೆ.

ABOUT THE AUTHOR

...view details