ಕರ್ನಾಟಕ

karnataka

ETV Bharat / state

ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ರಂಗು, ಚಲನ ಚಿತ್ರೋತ್ಸವಕ್ಕೂ ಚಾಲನೆ - mysore theater bnews

ಹಲವು ವರ್ಷಗಳ ಬಳಿಕ ಚರಕ ನೋಡಲು ಮತ್ತು ತಿರುಗಿಸಲು ಈ ನಾಟಕೋತ್ಸವ ವೇದಿಕೆ ಅನುವು ಮಾಡಿಕೊಟ್ಟಿದ್ದಕ್ಕೆ ಅಭಿನಂದನೆಗಳು ಎಂದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚರಕ ನೂಲುವ ಮೂಲಕ ಚಾಲನೆ ನೀಡಿದ ಹಿರಿಯ ನಟ ಅನಂತನಾಗ್ ಹೇಳಿದರು.

Bahuroopi National Theatre Festival 2020
Bahuroopi National Theatre Festival 2020

By

Published : Feb 15, 2020, 3:46 AM IST

Updated : Feb 15, 2020, 6:46 AM IST

ಮೈಸೂರು: ಹಲವು ವರ್ಷಗಳ ಬಳಿಕ ಚರಕ ನೋಡಲು ಮತ್ತು ತಿರುಗಿಸಲು ಈ ನಾಟಕೋತ್ಸವ ವೇದಿಕೆ ಅನುವು ಮಾಡಿಕೊಟ್ಟಿದ್ದಕ್ಕೆ ಅಭಿನಂದನೆಗಳು ಎಂದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚರಕ ನೂಲುವ ಮೂಲಕ ಚಾಲನೆ ನೀಡಿದ ಹಿರಿಯ ನಟ ಅನಂತನಾಗ್ ಹೇಳಿದರು.

ರಂಗಾಯಣದ ಆವರಣದಲ್ಲಿರುವ ವನರಂಗದಲ್ಲಿ ಮಾತನಾಡಿದ ಅವರು, ನಾನು ಕಳೆದ ಬಾಲ್ಯದ ಕಾಸರಗೋಡಿನ ಆನಂದಾಶ್ರಮದಲ್ಲಿ ಯಾವ ಮೂರ್ತಿಗಳ ಪೂಜೆ ಇರಲಿಲ್ಲ ಹೊರತಾಗಿ, ರಾಮಕೃಷ್ಣ ಪರಮಹಂಸರ, ವಿವೇಕಾನಂದ, ರಮಣ ಮಹರ್ಷಿ, ಸಿದ್ದಾರಾಮೇಶ್ವರ ಹಾಗೂ ಗಾಂಧೀಜಿ ಪೋಟೊ ಮಾತ್ರ ಇರುತ್ತಿತ್ತು.ಅಲ್ಲಿ ಬಿಟ್ಟರೆ ಇಲ್ಲಿಯೇ ಚರಕ ನೋಡಿದ್ದು ಎಂದರು.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

ನಂತರ ಸಚಿವ ಸಿ.ಟಿ.ರವಿ ಮಾತನಾಡಿ,ಈ ರಂಗಕ್ಷೇತ್ರ ಸಂಬಂಧವನ್ನು ಜೋಡಿಸುತ್ತದೆ. ಹಾಗಾಗಿ ಬಹಳ ಬೇಗ ಆವರಿಸಿಕೊಂಡು ಬಿಡುತ್ತದೆ. ಅಡ್ಡಂಡ ಅವರನ್ನು ನಿರ್ದೇಶಕರನ್ನಾಗಿ ಮಾಡಬೇಕಾದರೆ ಹಲವರ ಹೆಸರು ಕೇಳಿ ಬಂತು, ಆಗ ಕೊಡಗಿನವರನ್ನೇ ಆಯ್ಕೆ ಮಾಡಿದೆವು ಎಂದ ಅವರು, ನಾವಂತೂ ಯಾರು ಬಂದರೂ ಅಪ್ಪಿಕೊಳ್ಳುತ್ತೇವೆ. ಕೆಲವರೂ ಅಪ್ಪಿಕೊಂಡರು ತೊಂದರೆ ಕೊಡುವವರಿದ್ದಾರೆ. ಅದಕ್ಕಾಗಿಯೇ ನಾವು ದೇವರೊಬ್ಬ ನಾಮ ಹಲವು ಎಂಬ ತತ್ವವನ್ನು ಅಳವಡಿಸಿಕೊಂಡಿದ್ದೇವೆ. ಎಲ್ಲರೂ ಅದನ್ನೇ ಹೇಳಿ ಬಿಟ್ಟರೆ ಬಹುಶಃ ದರ್ಮದ ಜಗಳಕ್ಕೆ ಆಸ್ಪದವೇ ಇರುವುದಿಲ್ಲ. ಅದಕ್ಕೆ ಗಾಂಧಿ ತತ್ವ ಪ್ರಸ್ತುತವಾಗಿದೆ ಎಂದು ಹೇಳಿದರು.

ವಿವಿಧ ಭಾಷೆಗಳ ಚಲನ ಚಿತ್ರೋತ್ಸವಕ್ಕೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಚಾಲನೆ ನೀಡಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಪ್ರತಿರೋಧ ಇದ್ದೇ ಇರುತ್ತದೆ. ನಮ್ಮಲ್ಲಿನ ಅಹಂ ಅನ್ನು ಬದಿಗೆ ಒತ್ತಿದರೆ ಬೆಳೆಯಲು ಸಾಧ್ಯ. ರಾಷ್ಟ್ರೀಯ ನಾಟಕೋತ್ಸವದಲ್ಲಿ ನಾಟಕ ಹಾಗೂ ಸಂವಾದಗಳ ಮೂಲಕ ತಮ್ಮ ತಮ್ಮ ನಿಲುವುಗಳನ್ನು ಪ್ರತಿಪಾದಿಸಿಕೊಳ್ಳಲು ವೇದಿಕೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿ, ದೇಶದ ವಿವಿಧ ಭಾಷೆಗಳ ಚಿತ್ರ ವೀಕ್ಷಿಸುವುದರಿಂದ ವಿಭಿನ್ನ ಆಲೋಚನೆ ಮೂಡಲು ಸಾಧ್ಯ. ನಾಟಕ ಹಾಗೂ ಸಂಸ್ಕೃತಿಯನ್ನು ಒಗ್ಗಿಸುವುದು ನಾಟಕಕಾರನ ಕಲೆಯಾಗಿದೆ. ರಂಗಪ್ರದರ್ಶನಗಳ ಚರ್ಚೆಯಾದರೆ ಮಾತ್ರ ನಾಟಕಗಳು ಯಶಸ್ವಿಯಾಗಲು ಕಾರಣ ಎಂದು ತಿಳಿಸಿದರು.

ಸಮಾರಂಭದ ವೇದಿಕೆಯ ಮೇಲೆ ರಂಗಾಯಣ ನಿರ್ದೇಶಕ ಅಡ್ಡಂಡ . ಕಾರ್ಯಪ್ಪ, ಪರಿಸರವಾದಿ ಕೆ ಮನು,ಹಿರಿಯ ಕಲಾವಿದ ಹುಲಗಪ್ಪ ಕಟ್ಟಿಮನಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

Last Updated : Feb 15, 2020, 6:46 AM IST

ABOUT THE AUTHOR

...view details