ಕರ್ನಾಟಕ

karnataka

ETV Bharat / state

ಬಿಸಿನೀರಿನಿಂದ ಸಾವಿಗೀಡಾದ ಮಗು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಬಿಸಿ ನೀರಿನಿಂದಾಗಿ ಮಗುವೊಂದು ಸಾವಿಗೀಡಾಗಿದೆ. ನಗರದ ದಾಸನಕೊಪ್ಪಲುವಿನಲ್ಲಿ ಘಟನೆ ಜರುಗಿದೆ.

ಬಿಸಿನೀರಿಗೆ ಬಿದ್ದು ಮುದ್ದು ಕಂದನ ಸಾವು
ಬಿಸಿನೀರಿಗೆ ಬಿದ್ದು ಮುದ್ದು ಕಂದನ ಸಾವು

By

Published : Dec 13, 2021, 9:58 PM IST

Updated : Dec 13, 2021, 10:51 PM IST

ಮೈಸೂರು: ಬಿಸಿ ನೀರಿನಿಂದಾಗಿ ಮಗುವೊಂದು ಸಾವಿಗೀಡಾಗಿದೆ. ಘಟನೆ ಸಂಬಂಧ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ದಾಸನಕೊಪ್ಪಲು ನಿವಾಸಿಯಾದ ಫೋಟೊಗ್ರಾಫರ್ ರಾಮು ಅವರ 2 ವರ್ಷದ ಮಗು ಈ ದಾರುಣ ಅಂತ್ಯಕಂಡಿದೆ.

ಮಗುವಿನ ತಾಯಿ ಮಗುವಿಗೆ ಸ್ನಾನ ಮಾಡಿಸುವ ಉದ್ದೇಶದಿಂದ ಬಿಸಿನೀರನ್ನು ಬಚ್ಚಲು ಮನೆಯಲ್ಲಿಟ್ಟು ಹೊರ ಹೋಗಿದ್ದಾರೆ. ಆ ಕ್ಷಣದಲ್ಲಿ ಮಗು ಬಚ್ಚಲು ಮನೆಗೆ ಹೋಗಿ ಬಿಸಿ ನೀರು ಇದ್ದ ಬಕೆಟ್​ಗೆ ಕೈ ಹಾಕಿದೆ. ಆ ವೇಳೆ ಕೈ ಸುಟ್ಟಿದ್ದರಿಂದ ಅರಿವಿಲ್ಲದೇ ಬಕೆಟ್​ ಬಡಿದಿದೆ. ಪರಿಣಾಮ ಬಕೆಟ್​ ಮಗುಚಿದ್ದು, ಅದರಲ್ಲಿದ್ದ ಬಿಸಿ ನೀರು ಮಗುವಿಗೆ ಹಾರಿದೆ. ಆ ವೇಳೆ ಮಗುವಿಗೆ ಗಂಭಿರ ಗಾಯವಾಗಿದೆ.

ಮಗುವಿನ ಚೀರಾಟ ಕೇಳಿ ಓಡಿಬಂದ ಪೋಷಕರು ಮಗುವನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಕಂದನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗುವಿನ ಅಂತಿಮ ಕಾರ್ಯವನ್ನು ಇಂದೇ ನೆರವೇರಿಸಲಾಗಿದೆ.

ಇದನ್ನೂ ಓದಿ: ಶಂಕರ್ ಕುಟುಂಬ ಆತ್ಮಹತ್ಯೆ ಪ್ರಕರಣ: ಹಸಿವಿನಿಂದ ಮಗು ಮೃತಪಟ್ಟಿಲ್ಲ ಕೊಲೆ ಎಂದು ಎಫ್‌ಎಸ್‌ಎಲ್ ವರದಿ

Last Updated : Dec 13, 2021, 10:51 PM IST

ABOUT THE AUTHOR

...view details