ಮೈಸೂರು: ಕೊರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಯೇ ಅತ್ಯಂತ ಮುಖ್ಯವಾದ ಕಾರಣ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಅಶ್ವಗಂಧ ಚೂರ್ಣ, ಸಂಸಮನಿ ವಟಿ, ಆರಕ್ ಅಜೀಬ್ ಎಂಬ ಆಯುರ್ವೇದ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇದನ್ನು ಪಡೆಯಲು ಇಂದು ಸರ್ಕಾರಿ ಆಸ್ಪತ್ರೆ ಮುಂದೆ ಜನ ಸಾಲುಗಟ್ಟಿ ನಿಂತಿದ್ದರು.
ರೋಗ ನಿರೋಧಕ ಶಕ್ತಿಗಾಗಿ ಆಯುರ್ವೇದ ಔಷಧ ವಿತರಣೆ..! - covid-19 precautions
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಅಶ್ವಗಂಧ ಚೂರ್ಣ, ಸಂಸಮನಿ ವಟಿ, ಆರಕ್ ಅಜೀಬ್ ಎಂಬ ಆಯುರ್ವೇದ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
![ರೋಗ ನಿರೋಧಕ ಶಕ್ತಿಗಾಗಿ ಆಯುರ್ವೇದ ಔಷಧ ವಿತರಣೆ..! ರೋಗ ನಿರೋಧಕ ಶಕ್ತಿಗಾಗಿ ಆಯುರ್ವೇದ ಔಷಧ](https://etvbharatimages.akamaized.net/etvbharat/prod-images/768-512-8076884-732-8076884-1595073395234.jpg)
ರೋಗ ನಿರೋಧಕ ಶಕ್ತಿಗಾಗಿ ಆಯುರ್ವೇದ ಔಷಧ
ರೋಗ ನಿರೋಧಕ ಶಕ್ತಿಗಾಗಿ ಆಯುರ್ವೇದ ಔಷಧ
ಉಚಿತ ಆಯುರ್ವೇದ ಔಷಧಿ ಪಡೆಯಲು ಆಗಮಿಸುವ ಜನರು ಕಡ್ಡಾಯವಾಗಿ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ ಹೊಂದಿರಬೇಕು. ಒಮ್ಮೆ ಒಬ್ಬರಿಗೆ ಔಷಧಿಯನ್ನು ನೀಡಿದರೆ, ಒಂದು ತಿಂಗಳ ಕಾಲ ಅವರಿಗೆ ನೀಡುವುದಿಲ್ಲ.
ಅಶ್ವಗಂಧ ಚೂರ್ಣ, ಸಂಸಮನಿ ವಟಿ, ಆರಕ್ ಅಜೀಬ್ ಈ ಔಷಧಿಗಳನ್ನು ಜನರಿಗೆ ನೀಡುವುದರ ಜೊತೆಗೆ ಅದರ ಬಳಕೆಯ ವಿಧಾನವನ್ನು ಹೇಳಲಾಗುತ್ತಿದೆ.