ಮೈಸೂರು :ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದು, ಶರನ್ನವರಾತ್ರಿಯ 9ನೇ ದಿನವಾದ ಇಂದು ಅರಮನೆಯ ಸವಾರಿ ತೊಟ್ಟಿಯಲ್ಲಿ ಆಯುಧ ಪೂಜೆ ನಡೆಯಿತು,
ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಪಟ್ಟದ ಆನೆ, ಕುದುರೆಗಳಿಗೆ ಪೂಜೆ - ಮೈಸೂರು ದಸರಾ ಉತ್ಸವ
ದಸರಾ ಕಾರ್ಯಕ್ರಮದ ಭಾಗವಾಗಿ ಇಂದು ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು.
![ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಪಟ್ಟದ ಆನೆ, ಕುದುರೆಗಳಿಗೆ ಪೂಜೆ Ayudha Pooja at Mysuru Palace](https://etvbharatimages.akamaized.net/etvbharat/prod-images/768-512-9305620-thumbnail-3x2-hrss.jpg)
ಅರಮನೆಯಲ್ಲಿ ಆಯುಧ ಪೂಜೆ ನಡೆಯಿತು
ಅರಮನೆಯಲ್ಲಿ ಆಯುಧ ಪೂಜೆ ನಡೆಯಿತು
ಆಯುಧ ಪೂಜೆ ಪ್ರಯುಕ್ತ ಬೆಳಿಗ್ಗೆಯಿಂದಲೇ ಅರಮನೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಯಿತು. ಬೆಳಿಗ್ಗೆ 10:15 ಕ್ಕೆ ಸವಾರಿ ತೊಟ್ಟಿಗೆ ಆಗಮಿಸಿದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪಟ್ಟದ ಆನೆ, ಕುದುರೆ, ಒಂಟೆ ಹಾಗೂ ಹಸುವಿಗೆ ಪುಷ್ಪಾರ್ಚನೆ ಮಾಡಿ ಮಹಾ ಮಂಗಳಾರತಿ ಮಾಡಿದರು. ಇದೇ ಸಂದರ್ಭದಲ್ಲಿ ತಾವು ಬಳಸುವ ಐಷಾರಾಮಿ ಕಾರುಗಳಿಗೂ ಪೂಜೆ ನೇರವೇರಿಸಿದರು.
ಆಯುಧ ಪೂಜೆ ಬಳಿಕ ವಂದನೆ ಸ್ವೀಕರಿಸಿ ಸರಳ ಮತ್ತು ಸಾಂಪ್ರದಾಯಿಕ ಆಯುಧ ಪೂಜೆ ಪೂರ್ಣಗೊಳಿಸಿದರು. ರಾಜ ಪೋಷಾಕಿನಲ್ಲಿ ಮಹಾರಾಜ ಯದುವೀರ್ ವಿರಾಜಮಾನರಾಗಿದ್ದರು.
Last Updated : Oct 25, 2020, 1:41 PM IST