ಮೈಸೂರು : ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಚಿತ್ರಕಲೆಯ ಮೂಲಕ ಕುಂಚ ಕಲಾವಿದರ ಸಂಘದಿಂದ ವಿಶಿಷ್ಟ ಜಾಗೃತಿ ಅಭಿಯಾನ ಆರಂಭಿಸಲಾಗಿದೆ.
ಕುಂಚ ಕಲಾವಿದರ ಸಂಘದಿಂದ ಚಿತ್ರ ಬಿಡಿಸುವ ಮೂಲಕ ಕೊರೊನಾ ಬಗ್ಗೆ ಜಾಗೃತಿ.. - brush artists' association
ಸರ್ಕಾರದ ನಿಯಮಗಳನ್ನು ಪಾಲಿಸಿ, ಕೊರೊನಾ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ ಅನ್ನೋದು ಸೇರಿದಂತೆ ಮುಂತಾದ ಸಂದೇಶಗಳನ್ನು ಚಿತ್ರಕಲೆಯ ಮೂಲಕ ಸಾರಲಾಗುತ್ತಿದೆ.
![ಕುಂಚ ಕಲಾವಿದರ ಸಂಘದಿಂದ ಚಿತ್ರ ಬಿಡಿಸುವ ಮೂಲಕ ಕೊರೊನಾ ಬಗ್ಗೆ ಜಾಗೃತಿ.. Awareness of Corona](https://etvbharatimages.akamaized.net/etvbharat/prod-images/768-512-6707100-214-6707100-1586329261954.jpg)
ತಿ.ನರಸೀಪುರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೊರೊನಾ ವೈರಸ್ ಚಿತ್ರ ಬಿಡಿಸುವ ಮೂಲಕ ಕಲಾವಿದರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಕುಂಚ ಕಲಾವಿದರ ವಿಶಿಷ್ಟ ಜಾಗೃತಿ ಅಭಿಯಾನಕ್ಕೆ ಪೊಲೀಸ್ ಇಲಾಖೆ ಮತ್ತು ಪುರಸಭೆ ಕೈ ಜೋಡಿಸಿವೆ. ಸರ್ಕಾರದ ನಿಯಮಗಳನ್ನು ಪಾಲಿಸಿ, ಕೊರೊನಾ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ ಅನ್ನೋದು ಸೇರಿದಂತೆ ಮುಂತಾದ ಸಂದೇಶಗಳನ್ನು ಚಿತ್ರಕಲೆಯ ಮೂಲಕ ಸಾರಲಾಗುತ್ತಿದೆ.
ಈ ಬಗ್ಗೆ ಚಿತ್ರ ಕಲಾವಿದ ಸಿದ್ದಾಥ್೯ ಮಾತನಾಡಿ, ಇಂತಹ ಪರಿಸ್ಥಿತಿಯಲ್ಲಿ ಸಮಾಜದ ನಾಗರಿಕನಾಗಿ ನಮ್ಮ ಮೇಲೂ ಜವಾಬ್ದಾರಿ ಇದೆ. ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ. ಸಾರ್ವಜನಿಕರಲ್ಲಿ ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಎಚ್ಚರಿಕೆ ವಹಿಸಬೇಕು ಎಂದರು.