ಮೈಸೂರು: ಸಾರಿಗೆ ನೌಕರರ ಮುಷ್ಕರದಿಂದ ಜನರಿಲ್ಲದೆ ನಗರದ ಆಟೋ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ.
ನಗರದ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬಾರದಿರುವುದರಿಂದ ನಿಲ್ದಾಣ ಖಾಲಿ ಖಾಲಿಯಾಗಿದೆ. ಇತ್ತ ಪ್ರಯಾಣಿಕರನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಆಟೋ ಚಾಲಕರು ಸಮಸ್ಯೆಗೆ ಸಿಲುಕಿದ್ದಾರೆ. ಬಸ್ಗಳು ಓಡಾಡುತ್ತಿದ್ದ ದಿನಗಳಲ್ಲಿ 500, 600 ಬಾಡಿಗೆ ಮಾಡುತ್ತಿದ್ದ ಆಟೋ ಚಾಲಕರಿಗೆ ಕಳೆದ ಎರಡು ದಿನಗಳಿಂದ 100 ರೂ. ಸಂಪಾದಿಸುವುದು ಕಷ್ಟವಾಗಿದೆ.
ಬಾಡಿಗೆ ಇಲ್ಲದೆ ಆಟೋ ಚಾಲಕರ ಪರದಾಟ ಓದಿ : ನೀವು ಯಾರ ರಾಜಕೀಯ ದಾಳ ಆಗಬೇಡಿ: ಸಾರಿಗೆ ನೌಕರರಿಗೆ ಸಿಟಿ ರವಿ ಕಿವಿ ಮಾತು
ಬಸ್‌ಗಳಿಲ್ಲದ ಕಾರಣ ಜನ ಬರುತ್ತಿಲ್ಲ, ನಮಗಂತೂ ಬಾಡಿಗೆನೇ ಇಲ್ಲ. ನಿನ್ನೆಯಿಂದ ಖಾಲಿ ನಿಂತಿದ್ದೇವೆ, ನಮ್ಮ ಕಷ್ಟ ಯಾರು ಕೇಳ್ತಾರೆ ಸ್ವಾಮಿ. ಪ್ರಯಾಣಿಕರು 10 ರೂಪಾಯಿ ಜಾಸ್ತಿ ಕೇಳಿದ್ರೂ ಕೊಡಲ್ಲ, ಅವ್ರಿಗೂ ಕಷ್ಟ ಇದೆ. ನಮಗೆ ಆಟೋ ಲೋನ್, ಮನೆ ಬಾಡಿಗೆ, ಹೆಂಡ್ತಿ-ಮಕ್ಕಳು ಸಾಕೋದೇ ಕಷ್ಟವಾಗಿದೆ ಎನ್ನುತ್ತಾರೆ ಆಟೋ ಚಾಲಕರು.