ಮೈಸೂರು: ನನ್ನ ಆಟೋ ದಾಖಲಾತಿಗಳನ್ನು ಪರಿಶೀಲನೆ ಮಾಡಿದರೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಎಸ್ಐಗೆ ಬೆದರಿಕೆ ಹಾಕಿದ ಆಟೋ ಚಾಲಕನನ್ನು ಬಂಧಿಸಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.
ದಾಖಲಾತಿ ಪರಿಶೀಲಿಸಿದರೆ ಆತ್ಮಹತ್ಯೆ: ಪೊಲೀಸರಿಗೆ ಆಟೋ ಚಾಲಕನಿಂದ ಬೆದರಿಕೆ - undefined
ನನ್ನ ಆಟೋ ದಾಖಲಾತಿಗಳನ್ನು ಪರಿಶೀಲನೆ ಮಾಡಿದರೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಎಸ್ಐಗೆ ಬೆದರಿಕೆ ಹಾಕಿದ ಆಟೋ ಚಾಲಕನನ್ನು ಬಂಧಿಸಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.
ಪೊಲೀಸರಿಗೆ ಆಟೋ ಚಾಲಕ ಬೆದರಿಕೆ
ಎಎಸ್ಐಗೆ ಬೆದರಿಕೆ ಹಾಕಿದ ಆಟೋ ಚಾಲಕ ಶಿವಕುಮಾರ್ ಎನ್ನಲಾಗಿದೆ. ಈತ ಆಟೋ ಚಾಲನೆ ಮಾಡುತ್ತ ಹುಣಸೂರು ಪಟ್ಟಣದ ವಿನೋಬ ಕಾಲೋನಿಯಲ್ಲಿ ಬರುತ್ತಿರುವಾಗ, ಎಎಸ್ಐ ಪಾಪೇಗೌಡ ಆಟೋ ದಾಖಲಾತಿ ಕೇಳಿದ್ದಾರೆ. ಇದರಿಂದ ಕೋಪಗೊಂಡ ಆಟೋ ಡ್ರೈವರ್, ನನ್ನ ಆಟೋ ದಾಖಲಾತಿ ಪರಿಶೀಲನೆ ಮಾಡಿದರೆ ನಾನು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಪೊಲೀಸರಿಗೆ ಬೆದರಿಸಿದ್ದಾನೆ.
ಇದರಿಂದ ಪೊಲೀಸರು ಆಟೋ ಚಾಲಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.