ಮೈಸೂರು: ಮುಖದ ಮೇಲೆ ಮೊಬೈಲ್ ಟಾರ್ಚ್ ಬಿಟ್ಟಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ರೌಡಿಶೀಟರ್ ಮುಖಕ್ಕೆ ಟಾರ್ಚ್ ಬಿಟ್ಟಿದ್ದಕ್ಕೆ ಆಟೋ ಚಾಲಕನ ಕೊಲೆ! - mysore murder case
ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನ ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಬಿ.ಎಂ.ಶ್ರೀ ನಗರದ ನಿವಾಸಿ ಸೋಮಶೇಖರ್ (36) ಮೃತ ದುರ್ದೈವಿ. ಆರೋಪಿ ರೌಡಿಶೀಟರ್ ಸತ್ಯ ಪರಾರಿಯಾಗಿದ್ದಾನೆ.
ಕೊಲೆಯಾದ ಸೋಮಶೇಖರ್
ಇಲ್ಲಿನ ಬಿ.ಎಂ.ಶ್ರೀ ನಗರದ ನಿವಾಸಿ ಸೋಮಶೇಖರ್ (36) ಕೊಲೆಯಾದ ದುರ್ದೈವಿ. ಆಟೋ ಚಾಲಕನಾಗಿರುವ ಸೋಮಶೇಖರ್ ಮನೆಗೆ ಹೋಗುವಾಗ ರೌಡಿ ಶೀಟರ್ ಸತ್ಯನಿಗೆ ಮೊಬೈಲ್ ಟಾಚ್೯ ಬಿಟ್ಟಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಆತ, ಹರಿತವಾದ ಆಯುಧದಿಂದ ಇರಿದು, ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಪರಾರಿಯಾಗಿದ್ದು, ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.