ಕರ್ನಾಟಕ

karnataka

ETV Bharat / state

ಚಿನ್ನಾಭರಣ ಕಳೆದುಕೊಂಡಿದ್ದ ಮಹಿಳೆ: ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ - ಈಟಿವಿ ಭಾರತ ಕನ್ನಡ

ಚೇತನಾ ಎಂಬವರು ಚಿನ್ನಾಭರಣವನ್ನು ಕಳೆದುಕೊಂಡಿದ್ದು, ಆಟೋ ರಿಕ್ಷಾ ಚಾಲಕ ಸ್ವಾಮಿ ಎಂಬವರು ವಾಪಸ್​ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

auto-driver-has-handover-the-gold-to-lady-who-lost
ಚಿನ್ನಾಭರಣ ಕಳೆದುಕೊಂಡಿದ್ದ ಮಹಿಳೆ; ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

By

Published : Dec 8, 2022, 1:42 PM IST

ಮೈಸೂರು: ನಗರದ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪ್ರಯಾಣಿಕರೊಬ್ಬರು, ಕಳೆದು ಕೊಂಡಿದ್ದ ಚಿನ್ನಾಭರಣವನ್ನು ಆಟೋ ರಿಕ್ಷಾ ಚಾಲಕರೊಬ್ಬರು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಕಳೆದ ಡಿ.5 ರಂದು ಬೆಳಗ್ಗೆ 3 ಗಂಟೆ ಸಮಯದಲ್ಲಿ ತಮಿಳುನಾಡಿನ ತಿರುಚಿಯಿಂದ ಬಂದ ಚೇತನಾ ಎಂಬವರು, ಪ್ರಿಪೇಯ್ಡಿ ಆಟೋ ರಿಕ್ಷಾ ಸ್ಟಾಂಡ್‌ಗೆ ಬಂದಿದ್ದಾರೆ. ಈ ವೇಳೆ, ತಮ್ಮ ಬಳಿ ಇದ್ದ 24 ಗ್ರಾಂ ತೂಕದ ಮಾಂಗಲ್ಯ ಸರ, 10 ಗ್ರಾಂ ಸರ, 2 ಗ್ರಾಂ ತೂಕದ ಉಂಗುರವನ್ನು ಮಗನ ಕೈಗೆ ಕೊಟ್ಟಿದ್ದು, ಮಗ ತನ್ನ ಜರ್ಕಿನ್‌ಗೆ ಹಾಕಿಕೊಂಡಿದ್ದಾನೆ. ಮನೆಗೆ ಹೋದ ಮೇಲೆ ಚಿನ್ನಾಭರಣ ಇರದೇ ಇರುವುದು ಗಮನಕ್ಕೆ ಬಂದಿದ್ದು, ಮತ್ತೆ ನಿಲ್ದಾಣದ ಬಳಿ ಬಂದು ಹುಡುಕಾಟ ನಡೆಸಿದ್ದಾರೆ.

ಅಷ್ಟರಲ್ಲಿ ಸ್ಥಳದಲ್ಲಿದ್ದ ಆಟೋ ರಿಕ್ಷಾ ಚಾಲಕ ಸ್ವಾಮಿ ಎಂಬವರು ಸ್ಟ್ಯಾಂಡ್ ಬಳಿ ಬಿದ್ದಿದ್ದ ಚಿನ್ನಾಭರಣವನ್ನು ಸಂಗ್ರಹಿಸಿ, ನಿಲ್ದಾಣದಲ್ಲಿನ ಪೊಲೀಸರಿಗೆ ಒಪ್ಪಿಸಿದ್ದರು. ಅದೇ ಸ್ಥಳದಲ್ಲಿ ಚೇತನಾ ಅವರು ಚಿನ್ನಾಭರಣ ಹುಡುಕುತ್ತಿರುವುದನ್ನು ಗಮನಿಸಿ, ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ವಿಚಾರಣೆ ನಡೆಸಿ, ಚೇತನಾ ಅವರಿಗೆ ಚಿನ್ನಾಭರಣ ಹಿಂದಿರುಗಿಸಿದ್ದಾರೆ.

ಚೇತನಾ ಅವರಿಗೆ ಚಿನ್ನಾಭರಣ ಹಿಂದಿರುಗಿಸಿದ ಆಟೋ ರಿಕ್ಷಾ ಚಾಲಕ ಸ್ವಾಮಿ ಅವರ ಪ್ರಾಮಾಣಿಕತೆಯನ್ನು ಗುರುತಿಸಿ ದೇವರಾಜ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ಮುನಿಯಪ್ಪ ಅವರು ಅಭಿನಂದಿಸಿ ಗೌರವಿಸಿದ್ದಾರೆ.

ಇದನ್ನೂ ಓದಿ:ವಾಹನ ಸವಾರರ ಮೇಲೆ ಹೊಸ ಅಸ್ತ್ರ: ತಂತ್ರಜ್ಞಾನ ಬಳಸಿ ಸಂಚಾರಿ ನಿಯಮ ಉಲ್ಲಂಘನೆಗೆ ಕ್ರಮ

ABOUT THE AUTHOR

...view details