ಮೈಸೂರು:ಸಾಂಸ್ಕೃತಿಕ ನಗರಿಯ ಪೌರ ಕಾರ್ಮಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 20 ರಂದು ನೇರ ಸಂವಾದದಲ್ಲಿ ಮಾತನಾಡಲಿದ್ದಾರೆ.
ಆಗಸ್ಟ್ 20 ರಂದು ಮೈಸೂರಿನ ಪೌರ ಕಾರ್ಮಿಕರೊಂದಿಗೆ ಪ್ರಧಾನಿ ಸಂವಾದ - ಸ್ವಚ್ಛ ನಗರಿ ಅವಾರ್ಡ್
ಆಗಸ್ಟ್ 20 ರಂದು ಕೇಂದ್ರ ಸರ್ಕಾರದ ಸ್ವಚ್ಛ ಸರ್ವೆಕ್ಷಣ್ ನಿಂದ ಸ್ವಚ್ಛ ನಗರಿ ಪ್ರಶಸ್ತಿಯು ಪ್ರಕಟವಾಗಲಿದೆ.
Mysore
ಆಗಸ್ಟ್ 20 ರಂದು ಕೇಂದ್ರ ಸರ್ಕಾರದ ಸ್ವಚ್ಛ ಸರ್ವೆಕ್ಷಣ್ ನಿಂದ ಸ್ವಚ್ಛ ನಗರಿ ಪ್ರಶಸ್ತಿಯು ಆಗಸ್ಟ್ 20 ರಂದು ಪ್ರಕಟವಾಗಲಿದ್ದು , ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಲು ಸಿದ್ದತೆ ಮಾಡಿಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಈಗಾಗಲೇ 2014-15 ಮತ್ತು 2015-16 ರಲ್ಲಿ 2 ಬಾರಿ ದೇಶದಲ್ಲೆ ಸ್ವಚ್ಛ ನಗರಿ ಪ್ರಶಸ್ತಿ ಪಡೆದಿರುವ ಮೈಸೂರು, ಮೂರನೇ ಬಾರಿ ಸ್ವಚ್ಛ ನಗರಿ ಕಿರೀಟ ಪಡೆಯುವ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ.