ಮೈಸೂರು: ದಸರಾ ಕ್ರೀಡಾಕೂಟದಲ್ಲೇ ಅತಿಹೆಚ್ಚು ಬಲ ಪ್ರದರ್ಶನದ ಮೇಲೆ ನಡೆಯುವ ಗುಂಡು ಕಲ್ಲು ಎತ್ತುವ ಸ್ಪರ್ಧೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಎರಡು ನಿಮಿಷದಲ್ಲಿ 94ಕೆ.ಜಿ. ಭಾರದ ಗುಂಡು ಕಲ್ಲನ್ನು 20 ಬಾರಿ ಪಟ ಪಟನೆ ಎತ್ತಿ ಬಿಸಾಡುವ ಮೂಲಕ ನಾಗನಹಳ್ಳಿಯ ಪೈಲ್ವಾನ್ ಅವಿನಾಶ್ ಪ್ರಥಮ ಬಹುಮಾನಕ್ಕೆ ಪಾತ್ರರಾದರು.
94 ಕೆಜಿ ಗುಂಡು ಕಲ್ಲನ್ನು 20 ಬಾರಿ ಎತ್ತಿ ಬಿಸಾಡಿದ ಭೂಪ... ಇಲ್ಲಿದೆ ನೋಡಿ ಪೈಲ್ವಾನ್ ತಾಕತ್ತು - ಗುಂಡು ಕಲ್ಲು ಎತ್ತುವ ಸ್ಪರ್ಧೆ
ಬಲ ಪ್ರದರ್ಶನದ ಮೇಲೆ ನಡೆಯುವ ಗುಂಡು ಕಲ್ಲು ಎತ್ತುವ ಸ್ಪರ್ಧೆ ದಸರಾ ಕ್ರೀಡಾಕೂಟದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಎರಡು ನಿಮಿಷದಲ್ಲಿ 94ಕೆ.ಜಿ ಭಾರದ ಗುಂಡು ಕಲ್ಲನ್ನು 20 ಬಾರಿ ಪಟಪಟನೆ ಎತ್ತಿ ಬಿಸಾಡುವ ಮೂಲಕ ನಾಗನಹಳ್ಳಿಯ ಪೈಲ್ವಾನ್ ಅವಿನಾಶ್ ಪ್ರಥಮ ಸ್ಥಾನ ಪಡೆದರು.
ರೈತರು ಬಹುತೂಕದ ಗುಂಡು ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ನಾಗನಹಳ್ಳಿಯ ಪೈಲ್ವಾನ್ ಅವಿನಾಶ್ 2015ರಲ್ಲಿ ಮೊದಲ ಬಾರಿಗೆ ಪಾಲ್ಗೊಂಡು ಜಿಲ್ಲಾ ಮಟ್ಟದಲ್ಲಿ ಮೂರನೇ ಸ್ಥಾನ ಗಳಿಸಿದ್ದರು. ನಂತರ 2016 ಹಾಗೂ 2017ರಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಈ ಬಾರಿ 2 ನಿಮಿಷದಲ್ಲಿ 20 ಬಾರಿ 94 ಕೆ.ಜಿ. ತೂಕದ ಗುಂಡು ಕಲ್ಲು ಎತ್ತುವ ಮೂಲಕ ಮತ್ತೊಮ್ಮೆ ತಮ್ಮ ತಾಕತ್ತು ಪ್ರದರ್ಶಿಸಿದರು.
ಎರಡು ನಿಮಿಷಕ್ಕೆ 15 ಬಾರಿ 94 ಕೆ.ಜಿ. ತೂಕದ ಗುಂಡು ಕಲ್ಲು ಎತ್ತಿದ ಹಂಚ್ಯಾ ಗ್ರಾಮದ ಜಯಕುಮಾರ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರು ಸತತವಾಗಿ 2016, 2017 ಹಾಗೂ 2018ನೇ ಸಾಲಿನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಮಿಂಚಿದ್ದರು. ಇನ್ನು, ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ರವಿ ಹಾಗೂ ಮೈಸೂರು ತಾಲೂಕಿನ ಜಯಕುಮಾರ್ ಇಬ್ಬರೂ ಎರಡು ನಿಮಿಷದ ಅವಧಿಯಲ್ಲಿ ಸಮಬಲದ ಸಾಮರ್ಥ್ಯ ತೋರುವ ಮೂಲಕ ತೃತೀಯ ಸ್ಥಾನ ಹಂಚಿಕೊಂಡರು.