ಮೈಸೂರು:ನಿನ್ನೆ ತಡರಾತ್ರಿ ಸರಣಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ರಸ್ತೆಯಲ್ಲಿ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಂಜನಗೂಡಿನಲ್ಲಿ ಸರಣಿಗಳ್ಳತನಕ್ಕೆ ಯತ್ನ: ಕೃತ್ಯ ಸಿಸಿಟಿವಿಯಲ್ಲಿ ಸೆರೆ - ಸಿಸಿಟಿವಿ
ತಡರಾತ್ರಿ ಸರಣಿ ಕಳ್ಳತನ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ರಸ್ತೆಯಲ್ಲಿ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
df
ಕಳ್ಳರು 2 ಹಾರ್ಡ್‌ವೇರ್ ಅಂಗಡಿಯ ಬಾಗಿಲು ಮರಿದು ಕಳ್ಳತನಕ್ಕೆ ಯತ್ನಿಸಿದ್ದು, ಬಾಗಿಲು ಸಂಪೂರ್ಣವಾಗಿ ತೆಗೆಯದ ಕಾರಣ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇನ್ನು ಪಕ್ಕದಲ್ಲೇ ಇದ್ದ ಹಾಸಿಗೆ ಅಂಗಡಿಯ ಬಾಗಿಲು ಮುರಿದು 5,000 ರೂ ಮೌಲ್ಯದ ವಸ್ತುಗಳು ಮತ್ತು 4 ಬ್ಯಾಟರಿಗಳನ್ನು ಕಳವು ಮಾಡಿದ್ದು, 2 ಅಂಗಡಿಯಲ್ಲಿ ಕಳವು ಮಾಡಲು ಯತ್ನಿಸಿದಾಗ ಶಬ್ದಕ್ಕೆ ಹೆದರಿ ಕಳ್ಳರು ಪರಾರಿಯಾಗಿದ್ದಾರೆ.
ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated : Jun 19, 2019, 1:52 PM IST