ಕರ್ನಾಟಕ

karnataka

ETV Bharat / state

ಮೈಸೂರು: ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ 99,999 ರೂ. ಲಪಟಾಯಿಸಿದ ಖದೀಮರು - atm fraud case register in Cyber Crime Police Station in Mysore

ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ವೃದ್ಧನ ಕುಟುಂಬದಿಂದ 99,999 ರೂ.ಗಳನ್ನು ಖದೀಮರು ದೋಚಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

atm fraud case
ವಂಚನೆ

By

Published : Sep 19, 2021, 2:25 PM IST

ಮೈಸೂರು: ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ಎಟಿಎಂ ಮಾಹಿತಿ ಪಡೆದ ಖದೀಮರು ಕ್ಷಣಾರ್ಧದಲ್ಲಿ 99,999 ರೂ. ಲಪಟಾಯಿಸಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡಿನ ನೀಲಕಂಠನಗರದ ಗುಜರಿ ವ್ಯಾಪಾರಿ ಬಶೀರ್ ಅಹ್ಮದ್ ವಂಚನೆಗೊಳಗಾದವರು. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್​ನಲ್ಲಿ ಎಟಿಎಂ ಮಾಡಿಸಿಕೊಡುವುದಾಗಿ ನಂಬಿಸಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 99,999/- ರೂ. ಲಪಟಾಯಿಸಿದ್ದಾರೆ.

ವೃದ್ಧ ಕುಟುಂಬದಿಂದ 99,999 ರೂ. ಲಪಟಾಯಿಸಿದ ಖದೀಮರು

ಬಶೀರ್ ಅಹ್ಮದ್ ಅವರ ಪತ್ನಿ ಷಹಜಹಾನ್​ನರನ್ನು ಫೋನ್ ಮೂಲಕ ಸಂಪರ್ಕಿಸಿ, ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ವಂಚಕ ಬ್ಯಾಂಕ್ ಖಾತೆ ಮತ್ತು ಎಟಿಎಂ ನ ಸಂಪೂರ್ಣ ಮಾಹಿತಿ ಪಡೆದುಕೊಂಡು ಖಾತೆಯಲ್ಲಿದ್ದ ಹಣವನ್ನು ದೋಚಿದ್ದಾನೆ.‌

ಇದನ್ನೂ ಓದಿ:ನಟ ಸೋನು ಸೂದ್​​ 20 ಕೋಟಿ ರೂ. ಆದಾಯ ತೆರಿಗೆ ವಂಚನೆ : ಕಂದಾಯ ಇಲಾಖೆ ಆರೋಪ

ಬಶೀರ್ ಅಹ್ಮದ್ ಅವರು ನಂಜನಗೂಡಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದು, ಡೆಬಿಟ್ ಕಾರ್ಡ್ ಪಡೆದಿದ್ದಾರೆ. ಅಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್​ನಲ್ಲೂ ಖಾತೆ ಹೊಂದಿರುವ ಬಶೀರ್, ಇದರಲ್ಲಿ ಎಟಿಎಂ ಕಾರ್ಡ್ ಪಡೆದುಕೊಂಡಿರಲಿಲ್ಲ. ಈ ಮಾಹಿತಿ ಸಂಗ್ರಹಿಸಿದ ವಂಚಕರು ಎಟಿಎಂ ಮಾಡಿಸಿಕೊಡುವುದಾಗಿ ನಂಬಿಸಿ ಮೊಬೈಲ್​ನಲ್ಲೇ ಖಾತೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ನಂತರ ಒಮ್ಮೆ 49,999 ರೂ. ಹಾಗೂ ಮತ್ತೊಮ್ಮೆ 50,000 ರೂ. ಡ್ರಾ ಮಾಡಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ.‌

ಹಣ ಕಳೆದುಕೊಂಡ ಬಶೀರ್ ಅಹ್ಮದ್ ಈ ಕುರಿತು ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details