ಮೈಸೂರು: ಜಮೀನಿಗೆ ಬರಬಾರದು ಎಂದು ಸೋಲಿಗ ಜನಾಂಗದ ಮಹಿಳೆಯರ ಮೇಲೆ ಗ್ರಾಮ ಪಂಚಾಯತ್ ಸದಸ್ಯ ಹಲ್ಲೆ ಮಾಡಿರುವ ಆರೋಪ ತಡವಾಗಿ ಕೇಳಿಬಂದಿದೆ. ಪಿರಿಯಾಪಟ್ಟಣ ತಾಲೂಕಿನ ಅಮ್ಮತ್ತಿಹಾಡಿ ನಿವಾಸಿ ಭೈರಯ್ಯ ಕುಟುಂಬದ ಮಹಿಳೆಯರಾದ ಜಯಮ್ಮ, ಲಕ್ಷ್ಮಿ, ಶೋಭಾ ಎನ್ನುವರ ಮೇಲೆ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಎಂಬಾತ ಡಿ.10 ರಂದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಏನಿದು ಘಟನೆ:ಹಲವಾರು ವರ್ಷಗಳಿಂದ ಭೈರಯ್ಯ ಕುಟುಂಬಸ್ಥರು ಜಮೀನಿನಲ್ಲಿ ಉಳಿಮೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಏಕಾಏಕಿ ಬಂದ ಲೋಕೇಶ್, ಈ ಜಮೀನು ನಮಗೆ ಸೇರಿದೆ. ಇನ್ನು ಮೇಲೆ ಯಾರು ಉಳಿಮೆ ಮಾಡಲು ಬರಬಾರದು ಎಂದು ತಾಕೀತು ಮಾಡಿದ್ದಾನೆ.