ಕರ್ನಾಟಕ

karnataka

ETV Bharat / state

ಮೈಸೂರು: ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ 15 ಜನರ ಬಂಧನ - ಮೈಸೂರು

ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಸವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Mysore
ಪೊಲೀಸರ ಮೇಲೆ ಹಲ್ಲೆ ನಡೆಸಿದ 15 ಜನರ ಬಂಧನ

By

Published : Mar 23, 2021, 10:29 PM IST

ಮೈಸೂರು: ತಪಾಸಣೆ ವೇಳೆ ಬೈಕ್ ಸವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಲವಾಲ ಹೋಬಳಿಯ ಗಾಣಿಗರ ಹುಂಡಿ ನಿವಾಸಿ ವೆಂಕಟೇಶ್(28), ರಾಘು (25), ವಿಜಯನಗರ 4ನೇ ಹಂತದ ನಿವಾಸಿ ವಿನಯ್ (38), ಮಳವಳ್ಳಿಯ ಚಿಕ್ಕೇಬಾಗಿಲು ಗ್ರಾಮದ ನಿವಾಸಿ ಮಧು (25), ಬೋಗಾಧಿಯ ಸ್ವಾಮಿ (23), ಶ್ರೀಕಾಂತ್ (35), ಪಾಂಡವಪುರ ತಾಲೂಕಿನ ಚಿನಕುರುಳಿಯ ಅರುಣ್(23), ದೊಡ್ಡಕೊಪ್ಪಲು ಗ್ರಾಮದ ವಸಂತಕುಮಾರ್, ಕೂರ್ಗಳ್ಳಿಯ ಸೋಮಶೇಖರ್, ದಾಸನಕೊಪ್ಪಲು ಗ್ರಾಮದ ಅಕ್ಷಯ್ (27), ಮೈಸೂರಿನ ಮರಟಿಕ್ಯಾತನಹಳ್ಳಿ ನಿವಾಸಿ ದಂಡಪ್ಪ( 35), ಹಳೆ ಕಾಮನಕೊಪ್ಪಲಿನ ಮರಿಸ್ವಾಮಿ (32), ಹೊನ್ನೇನಹಳ್ಳಿಯ ಮೋಹನ್(33), ಲಾರಿ ಚಾಲಕರಾದ ಧನಂಜಯ ಮತ್ತು ಭರತ್ ಬಂಧಿತರು.

ಓದಿ:ಬೈಕ್​ ಸವಾರ ಸಾವು ಪ್ರಕರಣ : ಪೊಲೀಸರ ಮೇಲೆ ಹಲ್ಲೆ ಮಾಡಿದ 8 ಜನರ ಬಂಧನ

ಹಿನಕಲ್ ರಿಂಗ್ ರಸ್ತೆ ಬಳಿ ವಿ.ವಿ. ಪುರಂ ಸಂಚಾರಿ ಠಾಣಾ ಪೊಲೀಸರು ವಾಹನ ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಸವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರ ಮೇಲೆ ಬಂಧಿತರು ಹಲ್ಲೆ ಮಾಡಿದ್ದರು. ಅಲ್ಲದೇ ಹಿಂಬದಿ ಸವಾರನಿಂದ ಪೊಲೀಸರು ಈ ಸಂಬಂಧ ಅಧಿಕೃತ ವಿಡಿಯೋ ಬಿಡುಗಡೆ ಮಾಡಿದ್ದರು.

ABOUT THE AUTHOR

...view details