ಮೈಸೂರು: ವಾಯುವಿಹಾರಕ್ಕೆ ತೆರಳಿದ್ದ ಸಶಸ್ತ್ರ ಮೀಸಲು ಪಡೆ ಎಎಸ್ಐ ಮಹಾದೇವಸ್ವಾಮಿ ಅವರ ಪುತ್ರ ಶವವಾಗಿ ಪತ್ತೆಯಾಗಿದ್ದಾನೆ. 17 ವರ್ಷದ ಪುತ್ರ ಮನೋಜ್ ಇಂದು ಬೆಳಗ್ಗೆ ವಾಯುವ ವಿಹಾರಕ್ಕೆಂದು ತೆರಳಿದ್ದು, ಹಿಂದಿರುಗಿರಲಿಲ್ಲ.
ಮೈಸೂರು: ವಾಯುವಿಹಾರಕ್ಕೆ ತೆರಳಿದ ಎಎಸ್ಐ ಪುತ್ರ ಶವವಾಗಿ ಪತ್ತೆ - ಪೊಲೀಸ್ ಬಡಾವಣೆ
ವಾಯುವಿಹಾರಕ್ಕೆಂದು ತೆರಳಿದ್ದ ಎಎಸ್ಐ ಪುತ್ರ ಶವವಾಗಿ ಪತ್ತೆಯಾಗಿದ್ದಾನೆ. ಬಡಾವಣೆ ಹಿಂಬದಿಯ ನಾಲೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಯುವಿಹಾರಕ್ಕೆಂದು ತೆರಳಿದ್ದ ಎಎಸ್ಐ ಪುತ್ರ ಶವವಾಗಿ ಪತ್ತೆ
ಪೊಲೀಸ್ ಬಡಾವಣೆ 3ನೇ ಹಂತ (ಐಪಿಎಸ್ ನಗರ) ನಿವಾಸಿಯಾಗಿದ್ದ ಇವರು, ವಾಯುವಿಹಾರಕ್ಕೆಂದು ತೆರಳಿ ಮಧ್ಯಾಹ್ನವಾದರೂ ವಾಪಸಾಗಿರಲಿಲ್ಲ. ಆದರೆ ನಾಲೆಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಬಡಾವಣೆ ಹಿಂದಿನ ನಾಲೆಯಲ್ಲಿ ಕಾಲು ಜಾರಿ ಬಿದ್ದಿರಬಹುದೆಂದು ಪೋಷಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ಮೃತದೇಹ ಹೊರತೆಗೆದಿದ್ದಾರೆ. ಈ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅರಣ್ಯದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ: ಸ್ಥಳಕ್ಕೆ ಎಸ್ಪಿ ಭೇಟಿ