ಮೈಸೂರು: ನಗರದ ವಿವಿ ಪುರಂ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್ಐವೊಬ್ಬರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ(ASI Suicide) ಶರಣಾಗಿರುವ ಘಟನೆ ನಡೆದಿದೆ.
ಕೌಟುಂಬಿಕ ಕಲಹ: ಮೈಸೂರಲ್ಲಿ ನೇಣಿಗೆ ಶರಣಾದ ASI - ಕೌಟುಂಬಿಕ ಕಲಹ
ಕೌಟುಂಬಿಕ ಕಲಹದ ಹಿನ್ನೆಲೆ ಮನನೊಂದು ಮೈಸೂರು ವಿವಿ ಪುರಂ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್ಐ ಶಿವಕುಮಾರಸ್ವಾಮಿ (54) ಆತ್ಮಹತ್ಯೆ(ASI Suicide) ಮಾಡಿಕೊಂಡಿದ್ದಾರೆ.
ASI
ಶಿವಕುಮಾರಸ್ವಾಮಿ (54) ಆತ್ಮಹತ್ಯೆಗೆ ಶರಣಾದ ಎಎಸ್ಐ. ಇವರು ಗೌರಿಶಂಕರ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆ ಬೇಸತ್ತು ಶಿವಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಕೆ.ಆರ್. ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.