ಮೈಸೂರು:ಬಿಜೆಪಿ ಪಠ್ಯ ಸಂಸ್ಕರಣ ಮಾಡುತ್ತಿದ್ದಂತೆ, ನಿಮಗೆ ಚಾತುರ್ವರ್ಣದ ನೆನಪಾಗುತ್ತಿದೆ. ಈ ದೇಶದಲ್ಲಿ ವಾಜಪೇಯಿ ಸರ್ಕಾರ ಬರುವವರೆಗೂ ಅಂತಾರಾಜ್ಯ ರಸ್ತೆ ಇರಲಿಲ್ಲ. ನಾವು ರಸ್ತೆಗಳ ಬದಲಾವಣೆ ಮಾಡಿದ್ದೇವೆ. ಅದರ ಬಗ್ಗೆಯೂ ಮಾತನಾಡಿ. ಪಠ್ಯ ಪುಸ್ತಕದ ಮೇಲೆ ಮಾತನಾಡುತ್ತಿರುವವರು ವಿಷಯದ ಮೇಲೆ ಮಾತನಾಡುತ್ತಿದ್ದಾರಾ? ಅಥವಾ ರಾಜಕೀಯದ ಮೇಲೆ ಮಾತನಾಡುತ್ತಿದ್ದಾರಾ ಎಂದು ಪಠ್ಯ ವಿರೋಧಿಗಳ ವಿರುದ್ಧ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗರಂ ಆಗಿದ್ದಾರೆ.
ಬರಗೂರು ರಾಮಚಂದ್ರಪ್ಪ ಪಠ್ಯ ಬದಲಾಯಿಸಿದ್ರೆ ಅದು ವಿರೋಧವಲ್ಲ. ಆಗ ಒಂದೇ ಪಂಥದ ಪಠ್ಯ ಪುಸ್ತಕ ಸೇರಿದಾಗ ಅದು ತಪ್ಪಲ್ಲ ಅಲ್ವಾ?. ಈಗ ಮಾತ್ರ ನಿಮಗೆ ಪಂಥಗಳು ಕಾಣುತ್ತಿವೆ. ನಮ್ಮ ಇಚ್ಚೆ ಪಂಥದ್ದಲ್ಲ. ನಾವು ಎಲ್ಲವನ್ನು ಒಪ್ಪಿ ಶ್ರೇಷ್ಠವಾದುದ್ದನ್ನು ಕೊಡುತ್ತಿದ್ದೇವೆ. ಬಿಜೆಪಿ ಪಠ್ಯ ಸಂಸ್ಕರಣ ಮಾಡುತ್ತಿದ್ದಂತೆ. ನಿಮಗೆ ಚಾತುರ್ವರ್ಣ ಎಲ್ಲ ನೆನಪಾಗುತ್ತಿದೆಯಾ ಎಂದು ಪ್ರಶ್ನಿಸಿದರು.
ವಾಜಪೇಯಿ ಅಧಿಕಾರಕ್ಕೆ ಬಂದ ಮೇಲೆ ರಸ್ತೆ, ಶಿಕ್ಷಣ, ರೈತರ ಅಭಿವೃದ್ಧಿ ಆಗಿದೆ. ಈ ಹಿಂದೆ ಎಲ್ಲವೂ ಅಮೆರಿಕ ಹೇಳಿದಂತೆ ನಡೆಯುತ್ತಿತ್ತು. ಆದರೆ, ಒಬ್ಬ ಗಂಡು ಪ್ರಧಾನಿಯಾದ ಮೇಲೆ ಎಲ್ಲವು ಬದಲಾಯಿತು. ಕಾಂಗ್ರೆಸ್ನವರ ರೀತಿ ಯಾರು ಯಾರಿಗೋಸ್ಕರ ರಾಜಕಾರಣ ಮಾಡಿಲ್ಲ. ನಮ್ಮ ದೇಶದ ಜನರಿಗೋಸ್ಕರ ರಾಜಕಾರಣ ಮಾಡುತ್ತಿದ್ದೇವೆ. ಪರಿವರ್ತನೆ ಅನ್ನುವುದು ಜಗದ ನಿಯಮ. ಎಲ್ಲ ಮುಗಿದ ಬಳಿಕ ಈಗ ಚಾತುರ್ವರ್ಣ ಬಂದಿದೆ ಎಂದು ಅಸಮಾಧಾನ ಹೊರಹಾಕಿದರು.